ಉದಯವಾಹಿನಿ,ತಿರುವನಂತಪುರಂ: ಪ್ರಪಂಚವೇ ನೋಡದ ಅಂಬೆಗಾಲಿಡುತ್ತಿದ್ದ ಪುಟ್ಟ ಕಂದಮ್ಮ 5 ಮಕ್ಕಳ ಜೀವ ಉಳಿಸಲು ಕಾರಣವಾದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ. ತಮ್ಮ ಏಕೈಕ ಪುತ್ರಿಯನ್ನ ಅಪಘಾತದಲ್ಲಿ (Accident) ಕಳೆದುಕೊಂಡ ದಂಪತಿ, ಉಳಿದ ಮಕ್ಕಳ ಜೀವ ಉಳಿಸುವ ಗಟ್ಟಿ ಮನಸು ಮಾಡಿದ್ದಾರೆ. 5 ಮಕ್ಕಳ ಜೀವ ಉಳಿಸಲು ಕಾರಣರಾಗಿದ್ದಾರೆ ಕೇರಳ ದಂಪತಿ ಅರುಣ್ ಹಾಗೂ ಶೆರಿನ್. ಆ ಮೂಲಕ ಅಮರವಾಗಿದ್ದಾಳೆ ಮಗು ಅಲಿನ್ ಶೆರಿನ್ (Alin Sherin Abraham).

ಹೌದು. ಈ ಪ್ರಕರಣ ಈಗ ದೇಶದ ಗಮನ ಸೆಳೆದಿದೆ. ಅಲಿನ್ ಶೆರಿನ್‌ ಪೋಷಕರ ಒಪ್ಪಿಗೆ ಮೇರೆಗೆ ಅಂಗಾಂಗಗಳನ್ನ ಕೇರಳದ ವಿವಿಧ ಆಸ್ಪತ್ರೆಗಳಿಗೆ (Kerala Hospital) ದಾನ ಮಾಡಲಾಗಿದೆ. ಈ ಮೂಲಕ 10 ತಿಂಗಳ ಅಲಿನ್ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂದೆನಿಸಿಕೊಂಡಿದ್ದಾಳೆ. ಇದೇ ಫೆ.5 ರಂದು ಮಧ್ಯಾಹ್ನ ಸುಮಾರು 2:30 ರ ವೇಳೆಗೆ ಅಲಿನ್ ಶೆರಿನ್‌ ತನ್ನ ಕುಟುಂಬದೊಂದಿಗೆ ಕೊಟ್ಟಾಯಂನಿಂದ ಎಂ.ಸಿ ರಸ್ತೆ ಮೂಲಕ ತಿರುವಲ್ಲಾಗೆ ಪ್ರಯಾಣಿಸುತ್ತಿದ್ದಳು. ಆದ್ರೆ ಆ ದಿನ ಅಲಿನ್ ಬಾಳಲ್ಲಿ ವಿಧಿ ಆಟ ಆಡಿತ್ತು.

Leave a Reply

Your email address will not be published. Required fields are marked *

error: Content is protected !!