ಉದಯವಾಹಿನಿ, ಲಖನೌ: ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿದ ಪತಿಯೊಬ್ಬ ಆಕೆಯೊಂದಿಗೆ ತಗಾದೆ ತೆಗೆದಿದ್ದಾನೆ. ತನ್ನ ವಿಚಾರ ತಿಳಿದ ಗಂಡನನ್ನೇ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ಪ್ರಕರಣವಿದು ಮೈದುನನೊಂದಿಗೆ ಸೇರಿ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ( ಆಗ್ರಾದಲ್ಲಿ ನಡೆದಿದೆ.
ಸೀರೆಯನ್ನು ಕುಣಿಕೆಯಾಗಿ ಬಳಸಿ, ಶವವನ್ನು ಸೀಲಿಂಗ್ ಫ್ಯಾನ್‌ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾಳೆ. ನಂತರ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡ ಎಂದು ಗೋಳಾಡಿದ್ದಾಳೆ. ಇದನ್ನು ಆರಂಭದಲ್ಲಿ ನಂಬಿದ ಕುಟುಂಬಸ್ಥರು ಪೊಲೀಸರಿಗೆ ತಿಳಿಸದೆ ಶವವನ್ನು ದಹನ ಮಾಡಿದರು.
ಆದರೆ ಆಕೆಯ ವರ್ತನೆ ಬಗ್ಗೆ ಅನುಮಾನಗೊಂಡ ಪತಿಯ ಕೆಲವು ಸಂಬಂಧಿಕರು ಪ್ರಶ್ನೆ ಮಾಡಿದರು. ಈ ವೇಳೆ ಆಕೆಯ ಉತ್ತರದಲ್ಲಿ ಬದಲಾವಣೆ ಕಂಡುಬಂತು. ಬಹಳ ಪ್ರಶ್ನೆಗಳನ್ನು ಕೇಳಿದ ಬಳಿಕ ಕೊನೆಗೆ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಆತನ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ. ಹೀಗಾಗಿ ಆತನ ಸಾವು ಕುಟುಂಬವನ್ನು ಶೋಕದಲ್ಲಿ ಮುಳುಗಿಸಿತು. ಮೃತನ ತಂದೆಯ ದೂರಿನ ಆಧಾರದ ಮೇಲೆ ಏಕ್ತಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪತ್ನಿ ಮತ್ತು ಸೋದರ ಮಾವನನ್ನು ಬಂಧಿಸಿದ್ದಾರೆ.
