ಉದಯವಾಹಿನಿ, ಕೋಲ್ಕತ್ತಾ (ಪಶ್ಚಿಮ ಬಂಗಾಳ): ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿಲ್ಲಾಂಗ್​​ಗೆ ಹೊರಡಬೇಕಿದ್ದ ವಿಮಾನದಲ್ಲಿ ಬಾಂಬ್​ ಇರಿಸಿರುವುದಾಗಿ ಬೆದರಿಕೆ ಪತ್ರವೊಂದು ಸಿಕ್ಕಿದ್ದು, ಇದು ಆತಂಕಕ್ಕೆ ಕಾರಣವಾಯಿತು.
ಕೋಲ್ಕತ್ತಾದಿಂದ ಶಿಲ್ಲಾಂಗ್‌ಗೆ ಹೊರಡಬೇಕಿದ್ದ ಇಂಡಿಗೋದ 6E 3074 ವಿಮಾನದಲ್ಲಿ ಬೆದರಿಕೆ ಪತ್ರವೊಂದು ಲಭ್ಯವಾಗಿತ್ತು. ವಿಮಾನದ ಶೌಚಾಲಯದಲ್ಲಿ ಬಾಂಬ್​ ಬೆದರಿಕೆ ಇದ್ದ ಕಾಗದವೊಂದು ಸಿಬ್ಬಂದಿಗೆ ಸಿಕ್ಕಿತ್ತು. ಪತ್ರ ಲಭ್ಯವಾದ ತಕ್ಷಣವೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಗಿದ್ದು, ವಿಮಾನದ ಸಂಪೂರ್ಣ ತಪಾಸಣೆಗೆ ತೆಗೆದುಕೊಂಡು ಹೋಗಲಾಯಿತು.
ಈ ಕುರಿತು ಮಾಹಿತಿ ನೀಡಿದ ಎನ್​ಎಸ್​ಸಿಬಿಐ, ಕೋಲ್ಕತ್ತಾ ಶಿಲ್ಲಾಂಗ್​ ವಿಮಾನಕ್ಕೆ ಬಾಂಬ್​ ಬೆದರಿಕೆ ಪತ್ರವೊಂದು ಬಂದಿತು. ಈ ಹಿನ್ನೆಲೆಯಲ್ಲಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ತಪಾಸಣೆಗೆ ಕಳುಹಿಸಲಾಗಿದೆ. ವಿಮಾನ ಸಿಬ್ಬಂದಿ ಈ ಬೆದರಿಕೆ ಪತ್ರವನ್ನು ವಿಮಾನದ ಶೌಚಾಲಯದ ವಿಭಾಗದಲ್ಲಿ ಪತ್ತೆ ಮಾಡಿದ್ದು, ತಕ್ಷಣಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಗಳನ್ನು ಕೆಳಗಿಳಿಸಲಾಯಿತು. ಬಳಿಕ ತಪಾಸಣೆಗೆ ವಿಮಾನವನ್ನು ಅಜ್ಞಾತಸ್ಥಳಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಸುರಕ್ಷತಾ ಪರೀಕ್ಷೆಗಳು ಮುಂದುವರೆದಿದ್ದು, ಈ ಕುರಿತು ಮತ್ತಷ್ಟು ಮಾಹಿತಿಯನ್ನು ವಿಮಾನಯಾನ ಸಂಸ್ಥೆ ಮತ್ತು ಭದ್ರತಾ ಅಧಿಕಾರಿಗಳಿಂದ ನಿರೀಕ್ಷಿಸಲಾಗಿದೆ.ಕಳೆದ ತಿಂಗಳು ಜನವರಿ 23ರಂದು ಕೂಡ ದೆಹಲಿಯಿಂದ ಪುಣೆಗೆ ಹೊರಟ್ಟಿದ್ದ 6E 2608 ವಿಮಾನಕ್ಕೆ ಕೂಡ ಬಾಂಬ್​ ಬೆದರಿಕೆ ಕರೆ ಬಂದಿತು. ವಿಮಾನದ ಶೌಚಾಲಯದಲ್ಲಿ ಬೆದರಿಕೆ ಸಂದೇಶದ ಕೈ ಬರಹ ಹೊಂದಿದ್ದ ಪತ್ರ ಲಭ್ಯವಾಗಿತ್ತು.

Leave a Reply

Your email address will not be published. Required fields are marked *

error: Content is protected !!