ಉದಯವಾಹಿನಿ, ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭಾರತದ ಮುಂದೆ ತನ್ನ ಬೇಡಿಕೆಯನ್ನು ಇಟ್ಟಿದೆ.
ಅದೇನೆಂದರೆ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ವಿಚಾರಣೆ ಎದುರಿಸಲು ಭಾರತದಿಂದ ಗಡಿಪಾರು ಮಾಡಬೇಕೆಂಬುವುದು.
ಬಿಎನ್‌ಪಿಯ ಹಿರಿಯ ನಾಯಕ ಸಲಾಹುದ್ದೀನ್ ಅಹ್ಮದ್, ವಿದೇಶಾಂಗ ಸಚಿವರು ಈಗಾಗಲೇ ಅವರ ಹಸ್ತಾಂತರಕ್ಕಾಗಿ ಮನವೊಲಿಸಿದ್ದಾರೆ ಮತ್ತು ನಾವು ಸಹ ಅದನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಕಾನೂನಿನ ಪ್ರಕಾರ ಅವರನ್ನು ಹಸ್ತಾಂತರಿಸಲು ನಾವು ಯಾವಾಗಲೂ ಒತ್ತಾಯಿಸುತ್ತೇವೆ. ಇದು ಎರಡು ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವಿನ ಪ್ರಕ್ರಿಯೆಯಾಗಿದೆ. ಬಾಂಗ್ಲಾದೇಶದಲ್ಲಿ ವಿಚಾರಣೆ ಎದುರಿಸಲು ದಯವಿಟ್ಟು ಅವರನ್ನು ವಾಪಸ್ ಕಳುಹಿಸುವಂತೆ ನಾವು ಭಾರತ ಸರ್ಕಾರವನ್ನು ಕೇಳಿಕೊಂಡಿದ್ದೇವೆ ಎಂದು ಅವರು ಹೇಳಿದರು.
