ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ ಭೂಕಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ತೀವ್ರತೆ ದಾಖಲಾಗಿದೆ.
ಈಶಾನ್ಯ ಖುಝಾರ್ ಪಟ್ಟಣದಿಂದ 86 ಕಿ.ಮೀ. ಈಶಾನ್ಯಕ್ಕೆ ಭೂಮಿಯಿಂದ 13 ಕಿ.ಮೀ. ಆಳದಲ್ಲಿ ಭೂಕಂಪನವಾಗಿದೆಯೆಂಕ ಪಾಕಿಸ್ತಾನದ ಭೂಕಂಪಶಾಸ್ತ್ರ ಇಲಾಖೆ (ಪಿಎಂಡಿ) ತಿಳಿಸಿದೆ.
ಮುಂಜಾನೆ 6:30ರ ಹೊತ್ತಿಗೆ ಭೂಕಂಪನವಾಗಿದ್ದು, ಬಲೂಚಿಸ್ತಾನದ ಝಾಲ್ ಮಾಗ್ನಿ, ಜಾಫರಾಬಾದ್ ಹಾಗೂ ನಾಸಿರಾಬಾದ್ ಪಟ್ಟಣಗಳಲ್ಲಿ ಭೂಮಿ ಕಂಪಿಸಿದೆ. ಅಲ್ಲದೆ ಸಿಂದ್ ಪ್ರಾಂತದ ಸುಕ್ಕೂರ್, ಖ್ಯಾಂಬರ್, ಶಾಹದ್‌ಕೋಟ್ ಹಾಗು ದಾಡು ಜಿಲ್ಲೆಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲವೆಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಕಿಟ್-ಬಾಲ್ಟಿಸ್ತಾನ್ ಹಾಗೂ ಖೈಬರ್ ಪತ್ತೊಂಖ್ಯಾ ಪ್ರಾಂತದ ಕೆಲವು ಪ್ರದೇಶಗಳಲ್ಲಿ 5.8 ತೀವ್ರತೆಯ ಭೂಕಂಪನವಾಗಿತ್ತು.

Leave a Reply

Your email address will not be published. Required fields are marked *

error: Content is protected !!