ಉದಯವಾಹಿನಿ, ದುಬೈ: ಪವಿತ್ರ ರಮಝಾನ್ ತಿಂಗಳು ಸಮೀಪಿಸುತ್ತಿರುವಂತೆಯೇ, ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮನ್ಸೂಮ್ ಅವರು ಶುಕ್ರವಾರದಂದು, ವಿಶ್ವದಾದ್ಯಂತದ ಕೋಟ್ಯಂತರ ಬಡಮಕ್ಕಳ ಹಸಿವು ನಿವಾರಣೆಗಾಗಿ ‘ಎಡ್ಜ್ ಆಫ್ ಲೈಫ್’ ಅಭಿಯಾನವನ್ನು ಘೋಷಿಸಿದ್ದಾರೆ. ಈ ಕಾರ್ಯಕ್ರಮವು ಅಪೌಷ್ಟಿಕತೆ ಹಾಗೂ ಹಸಿವಿನಿಂದ ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಸಾವಿಗೀಡಾಗುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶೇಖ್ ಮೊಹಮ್ಮದ್ ಅವರು, ಪವಿತ್ರವಾದ ರಮಝಾನ್ ಅತ್ಯಂತ ಉದಾರತೆ ಹಾಗೂ ಮಮತೆಯ ಮಾಸವಾಗಿದೆ. ಯುಎಇನ ಜನತೆಯ ಬೆಂಬಲದೊಂದಿಗೆ ಜಗತ್ತಿನಾದ್ಯಂತ ಸಮುದಾಯಗಳಿಗಾಗಿ ಮಾನವೀಯ ಅಭಿಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಯುಎಇನ ವಾರ್ಷಿಕ ಸಂಪ್ರದಾಯವಾಗಿದೆ ಎಂದರು.
