ಉದಯವಾಹಿನಿ, ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭಗಳಿಸಬಹುದು ಎಂಬ ಆಸೆ ತೋರಿಸಿ ಮಹಿಳಾ ಟೆಕ್ಕಿಗೆ 93 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ 38 ವರ್ಷದ ಟೆಕ್ಕಿಗೆ ಲಾಭದ ಆಸೆ ತೋರಿಸಿ ವಂಚಿಸಲಾಗಿದೆ. ವಿಐಪಿ ರುದ್ರಾ ಷೇರ್ಸ್ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಬಂದಿದ್ದ ಸಂದೇಶವನ್ನು ನಂಬಿ ಮಹಿಳೆ ಹಣ ಹೂಡಿಕೆ ಮಾಡಿದ್ದರು. ಹೆಚ್ಚಿನ ಲಾಭ ಪಡೆಯುವ ಆಸೆಯಿಂದ ಹಂತಹಂತವಾಗಿ 93 ಲಕ್ಷ ರೂ. ಹೂಡಿಕೆ ಮಾಡಿದ್ದರು. ಲಾಭಾಂಶ ಇರಲಿ ಹೂಡಿಕೆ ಮಾಡಿದ ಹಣ ಕೂಡ ವಾಪಸ್ ಬಾರದೇ ಇದ್ದಾಗ ಮಹಿಳೆಗೆ ವಂಚನೆಗೆ ಒಳಗಾಗಿದ್ದು ಅರಿವಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!