ಉದಯವಾಹಿನಿ, ರಾಜ್ಯದಲ್ಲಿ ಕೇಂದ್ರದಿಂದ ಬಂದ ವಿಶೇಷ ಸಹಾಯಧನದ ಬಳಕೆಯ ವಿಚಾರ ಈಗ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, 2025-26 ಸಾಲಿನ ಮೂಲಧನ ಹೂಡಿಕೆಗೆ ನೀಡಲಾಗಿದ್ದ 1,323.96 ಕೋಟಿ ರೂಪಾಯಿಗಳನ್ನು ನಿಗದಿತ ಯೋಜನೆಗಳಿಗೆ ಬಳಸದೇ ಇತರೆ ಕಾರ್ಯಗಳಿಗೆ ತಿರುಗಿಸಲಾಗಿದೆ ಎಂದು ಆರೋಪಿಸಿದದ್ದಾರೆ.
ಸಣ್ಣ ನೀರಾವರಿ ಯೋಜನೆಗಳಿಗೆ ಈ ಹಣ ತಲುಪಿಲ್ಲ ಎಂದು ಆರೋಪಿಸಿದ ಅವರು, ಹಣಕಾಸು ಇಲಾಖೆ ಮೊತ್ತವನ್ನು ತಡೆದು ಮುಂದಿನ ಹಂತದ ಅನುದಾನ ಪಡೆಯಲು ಕೃತಕ ಬಳಕೆ ಪ್ರಮಾಣಪತ್ರ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!