ಉದಯವಾಹಿನಿ, ಹೈದರಾಬಾದ್​: ಭಾರತದ ಮೊದಲ ಕೃತಕ ಬುದ್ದಿಮತ್ತೆ ಶೃಂಗಸಭೆ ಇಂದಿನಿಂದ ಆರಂಭವಾಗಿದೆ. ಈ ವೇದಿಕೆಯ ಮೂಲಕ ಭವಿಷ್ಯದ ಎಐ ಕುರಿತು ಚರ್ಚಿಸಲು ಜಾಗತಿಕ ತಂತ್ರಜ್ಞಾನ ದಿಗ್ಗಜರು ಮತ್ತು ಎಐ ಹೂಡಿಕೆದಾರರು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ.
ಇಂದಿನಿಂದ ಫೆ.20ರವರೆಗೆ ಸಾಗಲಿರುವ ಶೃಂಗಸಭೆಯಲ್ಲಿ ಸರಿಸುಮಾರು 45 ದೇಶಗಳ ಸಚಿವಾಲಯದ ನಿಯೋಗ ಮತ್ತು ಜಾಗತಿಕ ಎಐ ಕಂಪನಿಗಳ ಸಿಇಒಗಳು, ಟೆಕ್​ ಸಂಸ್ಥೆಗಳು ಭಾಗಿಯಾಗಲಿವೆ. ಇದರಲ್ಲಿ ಎಐ ನೀತಿ, ಸಂಶೋಧನೆ, ಉದ್ಯಮ ಅನ್ವಯಿಕೆ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ಕುರಿತು ಅಧಿವೇಶನ, ಪ್ರದರ್ಶನ ಮತ್ತು ಮುಖ್ಯ ಭಾಷಣ, ಸಂವಾದಗಳು ನಡೆಯಲಿವೆ. ಈ ಶೃಂಗಸಭೆ ತಂತ್ರಜ್ಞಾನದ ಅಭಿವೃದ್ಧಿಯನ್ನು ರೂಪಿಸುವಲ್ಲಿ ಭಾರತದ ಪಾತ್ರವನ್ನು ಎತ್ತಿ ತೋರಿಸುತ್ತದೆ.

ನವದೆಹಲಿಯ ಭಾರತ್​ ಮಂಟಪದಲ್ಲಿ ಸಾಗುತ್ತಿರುವ ಎಐ ಇಂಪ್ಯಾಕ್ಟ್​ ಶೃಂಗಸಭೆಯನ್ನು ಜಾಗತಿಕವಾಗಿ ಸಾಗಿರುವ ಪ್ರಮುಖ ಎಐ ಕಾರ್ಯಕ್ರಮವಾಗಿ ಪರಿಗಣಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಇಚ್ಛೆ ಅನೇಕರಲ್ಲಿದೆ. ಒಂದು ವೇಳೆ ಎಐ ತಂತ್ರಜ್ಞಾನ ಕುರಿತ ಆಸಕ್ತಿ ನಿಮಗಿದ್ದು ಸಂವಾದ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಾದರೆ, ಎಐ ಶೃಂಗಸಭೆಯ ಅಧಿಕೃತ ವೆಬ್​ಸೈಟ್​ ಅಥವಾ ಆ್ಯಪ್​ ಮೂಲಕ ನೋಂದಣಿ ಮಾಡಬಹುದು.

 

Leave a Reply

Your email address will not be published. Required fields are marked *

error: Content is protected !!