ಉದಯವಾಹಿನಿ, ಜೆರುಸೇಲಂ, ಇಸ್ರೇಲ್​: ಟೆಹ್ರಾನ್ ಜೊತೆಗಿನ ಯಾವುದೇ ಪರಮಾಣು ಒಪ್ಪಂದದ ಭಾಗವಾಗಿ ಇರಾನ್ ತನ್ನ ಎಲ್ಲಾ ಸಂಸ್ಕರಿಸಿದ ಯುರೇನಿಯಂ(ವಿದಳನಶೀಲ ಯುರೇನಿಯಂ-235) ಅನ್ನು ತ್ಯಜಿಸುವಂತೆ ಮತ್ತು ಹೆಚ್ಚು ಪುಷ್ಟೀಕರಿಸುವುದನ್ನು ನಿಷೇಧಿಸುವಂತೆ ಅಮೆರಿಕ ಒತ್ತಾಯಿಸಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಗ್ರಹಿಸಿದ್ದಾರೆ.
ಇರಾನ್​ ವಿದೇಶಾಂಗ ಸಚಿವ ಅಬ್ಬಾಸ್​ ಅರಘ್ವಿ ಭಾನುವಾರ ಸ್ವಿಜರ್ಲೆಂಡ್​ ಭೇಟಿ ಬೆನ್ನಲ್ಲೇ ಈ ಹೇಳಿಕೆ ಹೊರ ಬಿದ್ದಿದ್ದು, ಅಮೆರಿಕ ಇರಾನ್​ ಜೊತೆಗೆ ಪರಮಾಣು ಒಪ್ಪಂದ ಕುರಿತು ಎರಡನೇ ಸುತ್ತಿನ ಮಾತುಕತೆ ಆರಂಭವಾಗಿದೆ.
ಇರಾನ್​ನಿಂದ ಎಲ್ಲಾ ಯುರೇನಿಯಂ ಪುಷ್ಟೀಕರಣಗಳಿಂದ(ವಿದಳನಶೀಲ ಯುರೇನಿಯಂ-235 ಪ್ರಕ್ರಿಯೆ) ಹೊರ ಬರಬೇಕು. ಎರಡನೆಯದು ಯಾವುದೇ ಪುಷ್ಟೀಕರಣ ಸಾಮರ್ಥ್ಯ ಇರಬಾರದು. ಪುಷ್ಟೀಕರಣವನ್ನು ಉತ್ಕೃಷ್ಟಗೊಳಿಸಲು ಅನುವು ಮಾಡಿಕೊಡುವ ಉಪಕರಣಗಳು ಮತ್ತು ಮೂಲಸೌಕರ್ಯಗಳನ್ನು ನಾಶಮಾಡಬೇಕು. ಮೂರನೆಯದು, ಬ್ಯಾಲಿಸ್ಟಿಕ್ ಕ್ಷಿಪಣಿಗಳ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.
ಇರಾನ್‌ನ ಹೆಚ್ಚು ಶೇ 60ರಷ್ಟು ಪುಷ್ಟೀಕರಿಸಿದ ಯುರೇನಿಯಂನ ಸುತ್ತ ಗಣನೀಯ ಅನಿಶ್ಚಿತತೆ ಆವರಿಸಿದೆ. ಅಮೆರಿಕದ ಪ್ರಮುಖ ಯಹೂದಿ ಸಂಘಟನೆಗಳ ಅಧ್ಯಕ್ಷರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು, ಈ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ಆರಂಭಿಸಿದ್ದು, ಈ ಬಗ್ಗೆ ಷರತ್ತುಗಳನ್ನು ಹಾಕಲು ಒತ್ತಾಯಿಸಿದ್ದೇನೆ. ಅವರು ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ನಿರಂತರ ಪರಿಶೀಲನೆಗೆ ಮುಂದಾಗಬೇಕು ಎಂದು ಇದೇ ವೇಳೆ ಅವರು ಕರೆ ನೀಡಿದ್ದಾರೆ.ಎಲ್ಲದಕ್ಕೂ ನಿಜವಾದ ವಸ್ತುನಿಷ್ಠ ತಪಾಸಣೆಗಳು ಇರಬೇಕು. ಲೀಡ್- ಟೈಮ್ ತಪಾಸಣೆಗಳಿರುವುದಿಲ್ಲ, ಆದರೆ ಪರಿಣಾಮಕಾರಿ ತಪಾಸಣೆಗಳು ಇರಬೇಕು. ಒಪ್ಪಂದ ಸುಗಮವಾಗಿ ಮುಂದುವರಿಯಬೇಕಾದರೆ ಇವು ಮುಖ್ಯ ಎಂದು ನಾವು ನಂಬುವ ಅಂಶಗಳಾಗಿವೆ ಎಂದರು.

Leave a Reply

Your email address will not be published. Required fields are marked *

error: Content is protected !!