ಉದಯವಾಹಿನಿ, ಬೆಂಗಳೂರು: ಶಾಸಕರನ್ನ ಫಾರಿನ್ ಟ್ರಿಪ್ ಕಳಿಸಿ ಸಿದ್ದರಾಮಯ್ಯ ಜನರನ್ನ ಫೂಲ್ ಮಾಡೋಕೆ ಆಗೊಲ್ಲ ಎಂದು ಸಿಎಂ ವಿರುದ್ಧ ಬಿಜೆಪಿ ಎಮ್‌ಎಲ್‌ಸಿ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರು ವಿದೇಶಿ ಪ್ರವಾಸಕ್ಕೆ ಹೋಗ್ತಿರೋ ವಿಚಾರವಾಗಿ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ‌ನೀಡಿದರು. ಈ ವೇಳೆ, ಕರ್ನಾಟಕದ ರಾಜಕಾರಣ ಅಧೋಗತಿಗೆ ಹೋಗಿದೆ‌. ಇವರ ಆಡಳಿತ ನೋಡಿ ಜನ ನಗುತ್ತಿದ್ದಾರೆ. ಶಾಸಕರು ವಿದೇಶಿ ಪ್ರವಾಸಕ್ಕೆ ಯಾಕೆ ಹೋಗ್ತಾರೆ ಅಂತ ತಿಳಿದುಕೊಳ್ಳದಷ್ಡು ಜನರೇನು ದಡ್ಡರಲ್ಲ. ಕರ್ನಾಟದಲ್ಲಿ‌ 90% ಸಾಕ್ಷರತೆ ಇದೆ. ಜನರಿಗೆ ನೀವು ಏನ್ ಮಾಡ್ತೀರಾ ಅರ್ಥ ಅಗುತ್ತದೆ. ಜನರನ್ನ ಸಿದ್ದರಾಮಯ್ಯ ಫೂಲ್ ಮಾಡೋಕೆ ಅಗುವುದಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರೇ ಏನೇ ಇದ್ದರು ನೇರವಾಗಿ ಹೇಳಿ. ಕುರ್ಚಿ ಉಳಿಸಿಕೊಳ್ಳಲು ಈ ಸರ್ಕಸ್ ಬೇಕಾ? ಇದರಿಂದ ಜನರಿಗೆ ಏನ್ ಪ್ರಯೋಜನಾ? 2.5 ವರ್ಷದಿಂದ ಹೀಗೆ ಹೋಗ್ತಾ ಇದೆ. ಕರ್ನಾಟಕದಲ್ಲಿ ಆಡಳಿತವೂ ಇಲ್ಲ, ಅಭಿವೃದ್ಧಿಯೂ ಇಲ್ಲ. ಬರೀ ಕಿರಿಚಾಟ, ಎರೆಚಾಟ ನಡೆಯುತ್ತಿದೆ. ಸಿದ್ದರಾಮಯ್ಯನವರೇ ಈ ನಾಟಕ ನಿಲ್ಲಿಸಿ. ಗಂಭೀರವಾಗಿ ಜನರ ಕೆಲಸ ಮಾಡಿ. ಜನ ವೋಟ್ ಕೊಟ್ಟಿರೋದು ವಿದೇಶಕ್ಕೆ ಹೋಗೋಕೆ ಅಲ್ಲ. ಒಬ್ಬರಿಗೊಬ್ಬರು ಕಿತ್ತಾಡಲು, ಬೈದಾಡಲು ಅಧಿಕಾರ ಕೊಟ್ಟಿಲ್ಲ. ಜನರ ಕೆಲಸ, ನಾಡಿನ ಅಭಿವೃದ್ಧಿ ಕೊಟ್ಟಿರೋ ವೋಟ್ ಇದು. ಅದು ಸಿದ್ದರಾಮಯ್ಯ ನಾಯಕತ್ವದಲ್ಲಿ ಮಿಸ್ ಯೂಸ್ ಆಗ್ತಿದೆ. ಇದು ಸರಿಯಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!