ಉದಯವಾಹಿನಿ,ಕೊಲ್ಲಾಪುರ: ನಿಮ್ಮ ಪರಿಸರದ ಸುತ್ತ ಓತಿಕ್ಯಾತ ಕಂಡು ಬರುವುದು ಕಾಮನ್​. ಇವು ನಮಗೆನೂ ಹಾನಿ ಮಾಡದಿದ್ದರೂ, ಅನೇಕ ಜನರು ಅವುಗಳಿಗೆ ಹೆದರುತ್ತಾರೆ.ಸಾಮಾನ್ಯವಾಗಿ ಆರು ಇಂಚಿನಿಂದ ಒಂದು ಅಡಿಯಷ್ಟು ಉದ್ದ ಇರುವುದು ಕಂಡು ಬರುತ್ತವೆ. ಆದರೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ದೇಶದ ಅತಿ ಉದ್ದದ ಇಗ್ವಾನ – ಓತಿಕ್ಯಾತ ನೋಡುಗರ ಪ್ರಮುಖ ಆಕರ್ಷಣೆ ಆಗಿದೆ. ಪ್ರದರ್ಶನಕ್ಕೆ ಬಂದ ವೀಕ್ಷಕರು ಈ ಓತಿಕ್ಯಾತವನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಹಾಗಾದರೆ ಆ ಇಗ್ವಾನ ಎಷ್ಟು ಉದ್ದವಾಗಿದೆ? ಅದು ಯಾವ ಜಾತಿಗೆ ಸೇರಿದೆ? ಈ ಬಗ್ಗೆ ಮುಂದೆ ತಿಳಿದುಕೊಳ್ಳೋಣ.
ದೇಶದ ಅತಿ ಉದ್ದದ ಓತಿಕ್ಯಾತ( ಊಸರವಳ್ಳಿ) ಫೆಬ್ರವರಿ 13 ರಿಂದ 16 ರವರೆಗೆ ಮೂರು ದಿನಗಳ ಕಾಲ ಕೊಲ್ಲಾಪುರದ ಮೆರ್ರಿ ವೆದರ್ ಮೈದಾನದಲ್ಲಿ ನಡೆದ ಕೃಷಿ – ಜಾನುವಾರು ಮೇಳದಲ್ಲಿ ಪ್ರದರ್ಶಿಸಲಾಯಿತು. ಮುಂಬೈನ ಕಿಶೋರ್ ಚವ್ಹಾಣ್​ ಬೆಳೆಸಿದ ಇಗ್ವಾನಾ ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಎಂಟು ವರ್ಷದ ಹಲ್ಲಿ ಐದೂವರೆ ಅಡಿ ಉದ್ದ ಮತ್ತು 20 ಕೆಜಿ ತೂಕ ಹೊಂದಿದೆ. ಪ್ರದರ್ಶನಕ್ಕೆ ಬಂದ ಜನರು ದೇಶದ ಈ ಅತಿ ಉದ್ದದ ಓತಿಕ್ಯಾತವನ್ನು ಕುತೂಹಲದಿಂದ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದರು.

ಬಣ್ಣ ಬದಲಿಸುವ ಊಸರವಳ್ಳಿ: ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ಅವು ಬಣ್ಣಗಳನ್ನು ಬದಲಾಯಿಸುತ್ತವೆ. ಇಗ್ವಾನಾಗಳು ಹೆಚ್ಚಾಗಿ ಮಧ್ಯ ಮತ್ತು ದಕ್ಷಿಣ ಅಮೆರಿಕದ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಓತಿಕ್ಯಾತಗಳು ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಕಂಡುಬರುತ್ತವೆ. ಇಗ್ವಾನಾ ಕುಲದ ಈ ಊಸರವಳ್ಳಿಗಳು ಅವುಗಳ ವಿಶೇಷ ಲಕ್ಷಣಗಳಿಂದಾಗಿ ಬಹಳ ಜನಪ್ರಿಯವಾಗಿವೆ. ಬೂದು ಬಣ್ಣದಲ್ಲಿ ಹುಟ್ಟುವ ಈ ಓತಿಕ್ಯಾತಗಳು ಹವಾಮಾನ ಬದಲಾವಣೆಗಳಿಗೆ ಅನುಗುಣವಾಗಿ ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುತ್ತವೆ.

ಎಂಟು ವರ್ಷಗಳಿಂದ ಓತಿಕ್ಯಾತಗಳನ್ನು ಸಾಕುತ್ತಿರುವ ಕಿಶೋರ್ ಚವ್ಹಾಣ್​ ಕೊಲ್ಲಾಪುರದ ಪ್ರಾಣಿ ಪ್ರಿಯ. ಅವರು ಎಂಟು ವರ್ಷಗಳ ಹಿಂದೆ ಕೇರಳದಲ್ಲಿ ಇಗ್ವಾನಾ ಖರೀದಿಸಿ ತಂದಿದ್ದರು. ಅಂದಿನಿಂದ ಅವರು ತಮ್ಮ ಮನೆಯಲ್ಲಿ ಇತರ ಪ್ರಾಣಿಗಳ ಜೊತೆಗೆ ಅದನ್ನು ಸಾಕುತ್ತಿದ್ದಾರೆ. ಅವರು ಅದನ್ನು ತಮ್ಮ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಾರೆ. ಅವರು ಈ ಓತಿಕ್ಯಾತಕ್ಕೆ ‘ಟೋನ್ಯಾ’ ಎಂದು ಹೆಸರಿಸಿದ್ದಾರೆ. ದೇಶದ ಈ ಅತಿ ಉದ್ದದ ಊಸರವಳ್ಳಿಯನ್ನು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ನಡೆಯುವ ಪ್ರದರ್ಶನಗಳಿಗೆ ಕರೆದುಕೊಂಡು ಹೋಗುತ್ತಾರೆ. ಆ ಪ್ರದರ್ಶನಗಳಲ್ಲಿ ಇದುವೇ ಪ್ರಮುಖ ಆಕರ್ಷಣೆ ಆಗಿರುತ್ತೆ.

 

 

Leave a Reply

Your email address will not be published. Required fields are marked *

error: Content is protected !!