ಉದಯವಾಹಿನಿ, ಬೆಂಗಳೂರು: ಚಿತ್ರಮಂದಿರದಲ್ಲಿ ಫ್ಯಾನ್ಸ್ ಮಧ್ಯೆ ಲಾಂಗ್ ಹಿಡಿದು ಪೋಸ್ ನೀಡಿದ್ದಕ್ಕೆ ಜೆಸಿ ಸಿನಿಮಾ ಸೂರ್ಯ ಪ್ರಖ್ಯಾತ್ ವಿರುದ್ಧ ಗೋವಿಂದರಾಜ ನಗರ ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ.
ಸೂರ್ಯ ಪ್ರಖ್ಯಾತ್ ನಟನೆಯ ಜೆಸಿ ಸಿನಿಮಾ ಬಿಡುಗಡೆ ಆಗಿದೆ. ಈ ವೇಳೆ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಣೆಗೆ ನಟ ಪ್ರಖ್ಯಾತ್ ಕೂಡ ಆಗಮಿಸಿದ್ದರು. ಆಗ ಅಭಿಮಾನಿಗಳ ಮಧ್ಯೆ ಲಾಂಗ್ ಹಿಡಿದು ನಟ ಪೋಸ್ ನೀಡಿದ್ದಾರೆ. ಇದನ್ನು ಅಭಿಮಾನಿಗಳು ವಿಡಿಯೋ ಮಾಡಿ, ವೈರಲ್ ಮಾಡಿದ್ದರು. ಲಾಂಗ್ ಹಿಡಿದುಕೊಂಡಿರುವ ವಿಡಿಯೋ ಆಧಾರದ ಮೇಲೆ ಗೋವಿಂದರಾಜ ನಗರ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ. ಸದ್ಯ ಪೊಲೀಸರು ಲಾಂಗ್ ಬಗ್ಗೆ ಸ್ಪಷ್ಟನೆ ಕೊಡುವಂತೆ ನಟ ಸೂರ್ಯ ಪ್ರಖ್ಯಾತ್‌ಗೆ ನೋಟಿಸ್ ನೀಡಿದ್ದಾರೆ.
