ಉದಯವಾಹಿನಿ, ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಮನುಷ್ಯ ಮನುಷ್ಯನನ್ನು ನಂಬುವುದೇ ಕಷ್ಟ. ಹೀಗಾಗಿ ಮೂಕ ಜೀವಿಗಳೇ ಎಷ್ಟೋ ವಾಸಿ. ಒಮ್ಮೆ ಪ್ರೀತಿ, ಕಾಳಜಿ ತೋರಿಸಿದ್ರೆ ಆ ವ್ಯಕ್ತಿಯನ್ನು ಜೀವನ ಪರ್ಯಂತ ಮರೆಯಲ್ಲ. ಮಕ್ಕಳಂತೆ ಮನೆ ಮಾಲೀಕನ ಬರುವಿಕೆಗಾಗಿ ಕಾಯುತ್ತದೆ. ಈ ದೃಶ್ಯ ನೋಡಿದ ಮೇಲೆ ನಿಮಗೂ ಹಾಗೆಯೇ ಅನಿಸಬಹುದು. ತನ್ನ ಹಸಿವು ನೀಗಿಸಿದ ಮನೆ ಮಾಲೀಕನ ಮೇಲೆ ಈ ಬಾತುಕೋಳಿಗೆ ಎಷ್ಟು ಪ್ರೀತಿಯಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಇದೀಗ ಪುಟ್ಟ ಮಗುವಿನಂತೆ ಬಾತುಕೋಳಿಯೊಂದು  ಮನೆ ಮಾಲೀಕನನ್ನು ಹಿಂಬಾಲಿಸಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ಈ ಬಾತುಕೋಳಿಯ ಮುಗ್ಧತೆ ಹಾಗೂ ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರು ಕಳೆದೇ ಹೋಗಿದ್ದಾರೆ.
ಕೆ ವೀರೇಶ್ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆತನ ಹಿಂದೆ ಪುಟ್ಟ ಮಗುವಿನಂತೆ ಬಾತುಕೋಳಿಯೊಂದು ಹಿಂಬಾಲಿಸಿಕೊಂಡು ಹೊರಟಿದೆ. ಮನೆ ಮಾಲೀಕನು ಬಾತುಕೋಳಿಗೆ ಗದರಿ ಮನೆಗೆ ಹೋಗುವಂತೆ ಹೇಳುವುದನ್ನು ನೋಡಬಹುದು.

Leave a Reply

Your email address will not be published. Required fields are marked *

error: Content is protected !!