ಉದಯವಾಹಿನಿ, ಭೋಪಾಲ್‌: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 2 ವರ್ಷಗಳ ಹಿಂದೆ 5 ಮರಿಗಳಿಗೆ ಜನ್ಮ ನೀಡಿದ್ದ ʻಗಾಮಿನಿʼ ಚೀತಾ ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಇದರೊಂದಿಗೆ ಒಟ್ಟು ಚೀತಾಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಚೀತಾ ಮರುಪರಿಚಯ ಕಾರ್ಯಕ್ರಮದಲ್ಲಿ ʻಗಾಮಿನಿʼ ಚೀತಾವನ್ನ 2022 ರಲ್ಲಿ ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಆಗ ಗಾಮಿನಿಗೆ 5 ವರ್ಷ ವಯಸ್ಸಾಗಿತ್ತು. 2 ವರ್ಷಗಳ ಹಿಂದೆ 5 ಮರಿಗಳಿಗೆ ಜನ್ಮ ನೀಡಿದ್ದ ಗಾಮಿನಿ ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಒಟ್ಟು ಸಂಖ್ಯೆ 38ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.ಈ ಬೆಳವಣಿಗೆಯು ಭಾರತದ ಯಶಸ್ಸು ಮತ್ತು ದೃಢನಿಶ್ಚಯದ ಸಂರಕ್ಷಣಾ ಪ್ರಯತ್ನಗಳ ಪ್ರಬಲ ಸಂಕೇತ. ಆಮದು ಮಾಡಿಕೊಂಡ ಬಳಿಕ ಭಾರತದಲ್ಲಿ ಜನಿಸಿದ ಚೀತಾಗಳ ಸಂಖ್ಯೆ ಒಟ್ಟು 27ಕ್ಕೆ ತಲುಪಿದ್ದು, ಒಟ್ಟು ಸಂಖ್ಯೆ 38 ಆಗಿದೆ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!