ಉದಯವಾಹಿನಿ, ಸಿನಿಪ್ರಿಯರಿಗೆ ಮನರಂಜನೆಯ ಸುವರ್ಣಾವಕಾಶ ಸಿಕ್ಕಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಜುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ’45’ ಚಿತ್ರ ಇದೇ ಫೆಬ್ರವರಿ 22ರಂದು ಸಂಜೆ 4.30ಕ್ಕೆ Zee Kannada ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ‘45′ ಫ್ಯಾಂಟಸಿ ಆಕ್ಷನ್ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿದೆ. ವಿಭಿನ್ನ ಕಥಾಹಂದರದೊಂದಿಗೆ ಭಾವನೆ, ತತ್ವಚಿಂತನೆ ಮತ್ತು ಅತೀಂದ್ರೀಯ ಅಂಶಗಳನ್ನು ಒಳಗೊಂಡಿರುವ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಕಥೆ ವಿನಯ್ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಸುತ್ತ ಸಾಗುತ್ತದೆ. ಅವನ ಜೀವನದಲ್ಲಿ ನಡೆದ ಅನಿರೀಕ್ಷಿತ ಘಟನೆಯಿಂದ ಗೊಂದಲ ಶುರುವಾಗುತ್ತದೆ. ಸ್ಥಳೀಯ ಡಾನ್ ರಾಯಪ್ಪನ ಪ್ರಿಯ ನಾಯಿಯ ಸಾವಿಗೆ ಕಾರಣನಾದ ಬಳಿಕ, ವಿನಯ್‌ಗೆ 45 ದಿನಗಳ ಅವಧಿ ನೀಡಲಾಗುತ್ತದೆ. ಆ ಅವಧಿಯಲ್ಲಿ ಅವನು ತನ್ನ ಬದುಕಿನ ಅರ್ಥವನ್ನು ಅರಿಯಲು ಪ್ರಯತ್ನಿಸುತ್ತಾನೆ. ಈ ಮಧ್ಯೆ ಶಿವಣ್ಣ ಎಂಬ ವ್ಯಕ್ತಿ ಅವನಿಗೆ ಮಾರ್ಗದರ್ಶನ ನೀಡುತ್ತಾರೆ. 45 ದಿನಗಳ ಕೌಂಟ್‌ಡೌನ್ ನಡುವೆ ವಿಧಿ ಮತ್ತು ಮಾನವ ಚೈತನ್ಯದ ನಡುವಿನ ಹೋರಾಟವೇ ಚಿತ್ರದ ಮುಖ್ಯ ಆಕರ್ಷಣೆ.

Leave a Reply

Your email address will not be published. Required fields are marked *

error: Content is protected !!