ಉದಯವಾಹಿನಿ, ಆಯುರ್ವೇದ ಪದ್ಧತಿಯಲ್ಲಿ ಗಿಡಮೂಲಿಕೆಗಳ ಬಳಕೆಗೆ ವಿಶೇಷ ಸ್ಥಾನಮಾನವಿದೆ. ನಿತ್ಯಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ಅನೇಕ ಕಾಯಿಲೆಗಳನ್ನು ದೂರವಿಡಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ.
ಇವುಗಳಲ್ಲಿ ‘ತುಳಸಿ’ ಪ್ರಮುಖವಾಗಿದ್ದು, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಗುಣ ಹೊಂದಿರುವ ತುಳಸಿ, ದೇಹದ ಚಯಾಪಚಯ ಕ್ರಿಯೆಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆಯುರ್ವೇದದಲ್ಲಿ ಕೆಮ್ಮು ಮತ್ತು ಶೀತಕ್ಕೆ ತಯಾರಿಸುವ ಔಷಧಿಗಳಲ್ಲಿ ತುಳಸಿ ಪ್ರಮುಖ ಅಂಶವಾಗಿದೆ. ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರು ಗಂಟಲು ನೋವನ್ನು ಶಮನಗೊಳಿಸುತ್ತದೆ. ಜೇನುತುಪ್ಪ ಮತ್ತು ಶುಂಠಿಯೊಂದಿಗೆ ತುಳಸಿ ಕಷಾಯವನ್ನು ಸೇವಿಸುವುದರಿಂದ ಬ್ರಾಂಕೈಟಿಸ್, ಅಸ್ತಮಾ, ಇನ್ನುಯೆನ್ಸ, ಕೆಮ್ಮು-ಶೀತದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಮೂತ್ರಪಿಂಡದ ಕಲ್ಲುಗಳ ನಿವಾರಣೆ: ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸುಮಾರು 6 ತಿಂಗಳ ಕಾಲ ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡಗಳು ಬಲಗೊಳ್ಳುತ್ತವೆ. ಅಲ್ಲದೆ, ಇದು ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ:
ತುಳಸಿ ಎಲೆಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಮಕ್ಕಳ ಅನಾರೋಗ್ಯಕ್ಕೆ ರಾಮಬಾಣ:
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಾಂತಿ, ಭೇದಿ ಮತ್ತು ಜ್ವರದಂತಹ ಸಮಸ್ಯೆಗಳಿಗೆ ತುಳಸಿ ಎಲೆಯ ರಸ ಉತ್ತಮ ಔಷಧಿಯಾಗಿದೆ.
ಒತ್ತಡ ಮತ್ತು ತಲೆನೋವು ನಿರ್ವಹಣೆ:
ತುಳಸಿ ಎಲೆಗಳು ಒತ್ತಡ ನಿವಾರಕ ಆಗಿ ಕಾರ್ಯನಿರ್ವಹಿಸುತ್ತವೆ. ದಿನಕ್ಕೆರಡು ಬಾರಿ 12 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಬಾಯಿಯ ಸೋಂಕು:
ತುಳಸಿ ಎಲೆಗಳನ್ನು ಜಗಿಯುವುದರಿಂದ ಬಾಯಿಯಲ್ಲಿನ ಹುಣ್ಣುಗಳು ಮತ್ತು ಸೋಂಕುಗಳು ನಿವಾರಣೆಯಾಗುತ್ತವೆ.
ದಂತ ರಕ್ಷಣೆ:
ಒಣಗಿಸಿದ ತುಳಸಿ ಎಲೆಗಳ ಪುಡಿಯನ್ನು ಹಲ್ಲುಜ್ಜಲು ಬಳಸಬಹುದು. ಸಾಸಿವೆ ಎಣ್ಣೆಯೊಂದಿಗೆ ತುಳಸಿ ಪೇಸ್ಟ್ ತಯಾರಿಸಿ ವಸಡುಗಳಿಗೆ ಮಸಾಜ್ ಮಾಡುವುದರಿಂದ ಬಾಯಿ ದುರ್ವಾಸನೆ ಹೋಗಲಾಡಿಸಬಹುದು ಮತ್ತು ಒಟ್ಟಾರೆ ದಂತದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

 

Leave a Reply

Your email address will not be published. Required fields are marked *

error: Content is protected !!