ಉದಯವಾಹಿನಿ, ಬೆಂಗಳೂರು: ಎಮರ್ಜೆನ್ಸಿ ಸಮಯದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹಾಕಿದ್ದಾಗ, ಇದೇ ಸಿದ್ದರಾಮಯ್ಯ ಅಂದಿನ ಕಾಂಗ್ರೆಸ್ ಸರ್ಕಾರವನ್ನ ವಿರೋಧ ಮಾಡಿದ್ದರು. ಈಗ ಅವ್ರೇ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿರೋದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದರು. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಕೂಗಿದ್ರೆ ಕೇಸ್ ಹಾಕಲ್ಲ. ಮಹದೇವಪ್ಪ ನಾಯಿ ಅಂತ ಮಾತಾಡಿದ್ದಾರೆ. ನಾಯಿಗಳಿಗೆ ಅವಕಾಶ ಇದೆ. ಮಾಧ್ಯಮಗಳಿಗೆ ಇಲ್ಲವಾ? ಮಾಧ್ಯಮದವರು ಭಯೋತ್ಪಾದಕರಾ? ಮಾಧ್ಯಮ ಸ್ನೇಹಿತರು ವಿಧಾನಸೌಧಲ್ಲಿ ಓಡಾಡೋಕೆ ನಿರ್ಬಂಧ ಹಾಕೋದು ಸರಿಯಲ್ಲ. ಸಿಎಂ ಅವರು ದುರಹಂಕಾರವಾಗಿ ಮಾತಾಡಿದ್ದಾರೆ.
ಈ ಸರ್ಕಾರ ಜಾಸ್ತಿ ದಿನ ಇರಲ್ಲ ಎಂದು ಭವಿಷ್ಯ ನುಡಿದರು. 300 ಗ್ರಾಂ ಚಿನ್ನ, ಮಂತ್ರಿ ಕಚೇರಿಗೆ ಕ್ಯಾಶ್ ತರೋರು ಓಡಾಡಬಹುದು. ಸಿದ್ದರಾಮಯ್ಯ ಬದಲಾಗಿದ್ದಾರೆ. ಎಮರ್ಜೆನ್ಸಿಯಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹಾಕಿದ್ದಾಗ, ಸಿದ್ದರಾಮಯ್ಯ ಅವರು ಇದೇ ಕಾಂಗ್ರೆಸ್ ಸರ್ಕಾರವನ್ನ ವಿರೋಧ ಮಾಡಿದ್ದರು. ಇವತ್ತು ಕಾಂಗ್ರೆಸ್ ಗೆ ಬಂದು ನಿರ್ಬಂಧ ಹಾಕಿದ್ದಾರೆ. ಕೂಡಲೇ ನಿರ್ಬಂಧ ವಾಪಸ್ ಪಡೆಯಬೇಕು ಅಂತ ಆಗ್ರಹ ಮಾಡಿದ್ರು.
