ಉದಯವಾಹಿನಿ, ಮಳೆ ಇರಲಿ, ಚಳಿಗಾಲದ ಸಂಜೆ ಇರಲಿ ಅಥವಾ ಮನೆಗೆ ದಿಢೀರ್ ಅತಿಥಿಗಳು ಬರಲಿ ಪಕೋಡ ಅಂದ್ರೆ ಎಲ್ಲರ ಫೇವರೆಟ್ ಸ್ನ್ಯಾಕ್. ಆದರೆ ಪಕೋಡ ಕರಿದ ತಕ್ಷಣ ಅವು ಮೆತ್ತಗಾಗುತ್ತವೆ ಎಂಬುದು ಅನೇಕ ಜನರ ಕಂಪ್ಲೆಂಟ್. ಆದರೆ ಮತ್ತೆ ಕೆಲವರಿಗೆ ಗರಿಗರಿಯಾದ ಪಕೋಡಗಳನ್ನು ತಯಾರಿಸಲು ಬರುವುದೇ ಇಲ್ಲ. ಹಾಗಾದರೆ ಬನ್ನಿ ಪರ್ಫೆಕ್ಟ್ ಆಗಿ ಪಕೋಡ ತಯಾರಿಸುವ ರಹಸ್ಯವನ್ನು ತಿಳಿಯೋಣ.
ಪಕೋಡದ ಹಿಟ್ಟನ್ನು ಕೇವಲ ಕಡಲೆಹಿಟ್ಟು ಮತ್ತು ನೀರಿನಿಂದ ತಯಾರಿಸಿದರೆ ಕರಿದ ಸ್ವಲ್ಪ ಹೊತ್ತಿನ ನಂತರ ಅವು ತೇವಾಂಶವನ್ನು ಹೀರಿಕೊಳ್ಳುತ್ತವೆ. ವಿಶೇಷವಾಗಿ ಗಾಳಿಯಲ್ಲಿರುವ ತೇವಾಂಶವು ಪಕೋಡಗಳ ಕುರುಕುಲನ್ನು ಕಡಿಮೆ ಮಾಡುತ್ತದೆ. ಕಡಲೆಹಿಟ್ಟಿನಲ್ಲಿ ಪ್ರೋಟೀನ್ ಮತ್ತು ತೇವಾಂಶ ಹೆಚ್ಚಾಗಿರುತ್ತದೆ. ಇದು ತಣ್ಣಗಾದ ನಂತರ ಸಾಫ್ಟ್ ಟೆಕ್ಸ್ಚರ್ ನೀಡುತ್ತದೆ.
ಆದ್ದರಿಂದ ನೀವು ಕಡಲೆಹಿಟ್ಟಿನ ಮಿಶ್ರಣಕ್ಕೆ 1-2 ಚಮಚ ಕಾರ್ನ್‌ಫ್ಲೋರ್ ಬೆರೆಸಿದರೆ ಪಕೋಡಗಳು ಗರಿಗರಿಯಾಗುತ್ತವೆ. ಕಾರ್ನ್‌ಫ್ಲೋರ್‌ನಲ್ಲಿ ಸ್ಟಾರ್ಚ್ ಪ್ರಮಾಣ ಹೆಚ್ಚಿರುತ್ತದೆ, ಇದು ಕರಿಯುವ ಸಮಯದಲ್ಲಿ ಹೊರಪದರವನ್ನು ಹೆಚ್ಚು ಕ್ರಿಸ್ಪಿ ಮಾಡುತ್ತದೆ. ಸ್ಟಾರ್ಚ್ ಹೆಚ್ಚಿನ ತಾಪಮಾನದಲ್ಲಿ ಬೇಗನೆ ಒಣಗುತ್ತದೆ ಮತ್ತು ಗಟ್ಟಿಯಾದ ಪದರವನ್ನು ಸಿದ್ಧಪಡಿಸುತ್ತದೆ. ಇದರಿಂದ ಪಕೋಡಗಳು ದೀರ್ಘಕಾಲ ಗರಿಗರಿಯಾಗಿರುತ್ತವೆ.
ಒಂದು ಬೌಲ್‌ನಲ್ಲಿ ಕಡಲೆಹಿಟ್ಟು ಮತ್ತು ಕಾರ್ನ್‌ಫ್ಲೋರ್ ಬೆರೆಸಿ.
ಮಸಾಲೆಗಳನ್ನು ಹಾಕಿ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಗಟ್ಟಿಯಾದ ಹಿಟ್ಟು ತಯಾರಿಸಿ.
ಹಿಟ್ಟು ಅತಿ ತೆಳುವಾಗಿ ಅಥವಾ ತುಂಬಾ ಗಟ್ಟಿಯಾಗಿ ಇರದಂತೆ ಗಮನವಿರಲಿ.
ಕಡಾಯಿಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ.
ಮಧ್ಯಮ ಉರಿಯಲ್ಲಿ ಪಕೋಡಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ.
ಪಕೋಡಗಳನ್ನು ಯಾವಾಗಲೂ ಮೀಡಿಯಂ ಫ್ಲೇಮ್‌ನಲ್ಲಿ ಕರಿಯಿರಿ. ಅತಿ ಹೆಚ್ಚಿನ ಉರಿಯಲ್ಲಿ ಕರಿದರೆ ಅವು ಹೊರಗಿನಿಂದ ಬೇಗ ಬ್ರೌನ್ ಆಗುತ್ತವೆ, ಆದರೆ ಒಳಗೆ ಹಸಿ ಹಸಿಯಾಗಿ ಉಳಿಯಬಹುದು.
