ಉದಯವಾಹಿನಿ, ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು ) 8 ಮಂದಿಯನ್ನು ಬಂಧಿಸಿದ್ದಾರೆ. ತನ್ವೀರ್ (28) , ಮುಜ್ಜು (23), ಸದ್ದಾಂ(22), ಫಯಾಜ್(24), ಸರ್ಫರಾಜ್(33), ರಿಯಾನ್(21), ಅಯಾನ್(19), ವಸೀಮ್(22) ಬಂಧನಕ್ಕೆ ಒಳಗಾದ ಆರೋಪಿಗಳು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್, ವಿಡಿಯೋ ದೃಶ್ಯಗಳನ್ನು ಆಧಾರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನಾವು ಆರೋಪಿಗಳನ್ನು ಬಂಧಿಸಿದ್ದೇವೆ. ರಾತ್ರಿ 10:06ಕ್ಕೆ ಕಲ್ಲು ಎಸೆಯಲಾಗಿದೆ. ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ 7 ಮಂದಿ ಮೇಲೆ ಕೇಸ್‌ ದಾಖಲಿಸಿದ್ದೇವೆ ಎಂದರು.

ಡಿಜೆ ವಿಚಾರಕ್ಕೆ ಗಲಾಟೆ ನಡೆದಿಲ್ಲ. ಕಲ್ಲು ಮತ್ತು ಚಪ್ಪಲಿ ಎಸೆಯಲಾಗಿದೆ. ರಾತ್ರಿ 9:30ಕ್ಕೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿದ ಬಳಿಕ ಕೆಲವರು ಅಲ್ಲೇ ಉಳಿದುಕೊಂಡಿದ್ದರು. ಉಳಿದುಕೊಂಡ ವ್ಯಕ್ತಿಗಳ ಪೈಕಿ ತನ್ವೀರ್ ಕಲ್ಲು ಎಸೆದಿದ್ದಾನೆ ಎಂದು ಸಿದಾರ್ಥ್‌ ಗೋಯಲ್‌   ತಿಳಿಸಿದರು.
ಜೊತೆ ಮಾತನಾಡಿದ ಎಸ್‌ಪಿ, ತನ್ವೀರ್‌ ಉದ್ದೇಶಪೂರ್ವಕವಾಗಿಯೇ ಕಲ್ಲು ಎಸೆದಿದ್ದು ನಮ್ಮ ಇಬ್ಬರು ಕಾನ್‌ಸ್ಟೇಬಲ್‌ ಮತ್ತು ನನ್ನ ಮೇಲೆ ಬಿದ್ದಿತ್ತು. ನಾವೆಲ್ಲರೂ ಹೆಲ್ಮೆಟ್‌ ಹಾಕಿದ್ದರಿಂದ ಯಾವುದೇ ಗಂಭೀರ ಗಾಯವಾಗಿಲ್ಲ. ಮಸೀದಿಯಿಂದ ಕಲ್ಲು ಎಸೆದಿದ್ದು ನಮ್ಮ ವಿಡಿಯೋದಲ್ಲೂ ಸೆರೆಯಾಗಿದೆ ಎಂದು ತಿಳಿಸಿದರು. ಒಬ್ಬನೇ ವ್ಯಕ್ತಿ ಎರಡು ಕಲ್ಲು ಎಸೆದಿದ್ದಾನೆ. ಬಂದನಕ್ಕೆ ಒಳಗಾದ 8 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತೇವೆ. ಎರಡೂ ಗುಂಪಿನ ಹಿರಿಯರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!