ಉದಯವಾಹಿನಿ, ನವದೆಹಲಿ: ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಭಾರತದ ಯುಪಿಐ ವ್ಯವಸ್ಥೆಯನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಡಿ ಹೊಗಳಿದ ಬೆನ್ನಲ್ಲೇ ಈಗ ಕಾಂಗ್ರೆಸ್‌ ನಾಯಕ ಪವನ್ ಖೇರಾ ಡಿಜಿಟಲ್ ಪೇಮೆಂಟ್‌ಗೆ ಶಿಫಾರಸು ಮಾಡಿದ್ದೇ ನಾವು ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಗ್ರೂಪ್ ಪ್ರಾಜೆಕ್ಟ್‌ನಲ್ಲಿ ಒಬ್ಬ ಸಹಪಾಠಿ ಇರುತ್ತಾನೆ. ಆತ ಯಾವುದೇ ಕೆಲಸ ಮಾಡುವುದಿಲ್ಲ. ಆದರೆ ಆತ ಎಲ್ಲಾ ಕ್ರೆಡಿಟ್ ತೆಗೆದುಕೊಳ್ಳುತ್ತಾನೆ ಎಂದು ಎಕ್ಸ್‌ನಲ್ಲಿ ಬರೆದು ಮೋದಿಗೆ ಟಾಂಗ್‌ ಕೊಟ್ಟಿದ್ದಾರೆ.
ಪ್ರಮುಖ ವಿಚಾರಗಳ ಬಗ್ಗೆ ಯೋಚಿಸುವ ಸಾಮರ್ಥ್ಯವಿಲ್ಲದ ಮೋದಿ ರಿಬ್ಬನ್‌ಗಳನ್ನು ಕತ್ತರಿಸುವುದು, ಹಾಸ್ಯಾಸ್ಪದ ಸಂಕ್ಷಿಪ್ತ ರೂಪಗಳಲ್ಲಿ ಮಾತನಾಡುವುದು, ಕಾಂಗ್ರೆಸ್‌ ದೂರಿ ಕ್ರೆಡಿಟ್ ಕದಿಯುವುದರಲ್ಲಿ ಸಂತೋಷಪಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?: ಯುಪಿಐ ಆರಂಭಿಕ ಪರಿಕಲ್ಪನೆಯು 2012–2013ರಲ್ಲಿ ಆಗಿನ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ನೇತೃತ್ವದ ನಡೆಯಿತು. ಯುಪಿಎ ಸರ್ಕಾರ ನೇಮಿಸಿದ ಸಮಿತಿಯು ಡಿಸೆಂಬರ್ 2013 ರಲ್ಲಿ ಮೊಬೈಲ್ ಆಧಾರಿತ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಶಿಫಾರಸು ಮಾಡಿತ್ತು. 2010ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಅಭಿವೃದ್ಧಿಪಡಿಸಿದ ತಕ್ಷಣದ ಪಾವತಿ ಸೇವೆಯು ಇದಕ್ಕೆ ತಾಂತ್ರಿಕ ಬೆನ್ನೆಲುಬು ಹಾಕಿತ್ತು. ಎನ್‌ಪಿಸಿಐ 2013-2014 ರಲ್ಲಿ UPI ಆಗುವ ಕೋರ್ ಆರ್ಕಿಟೆಕ್ಚರ್ ಅನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿತು ಎಂದು ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!