ಉದಯವಾಹಿನಿ, ಲಂಡನ್: ಬ್ರಿಟನ್‌ನ ಮಾಜಿ ರಾಜಕುಮಾರ ಆ್ಯಂಡ್ರ ಮೌಂಟ್‌ಬ್ಯಾಟನ್-ವಿಂಡ್ಕರ್ ಅವರು ಈ ಹಿಂದೆ ವಾಸವಿದ್ದ ನಿವಾಸದಲ್ಲಿ ಪೊಲೀಸರು ಶೋಧ ನಡೆಸಿದರು. ಲೈಂಗಿಕ ಅಪರಾಧಿ ಎಪ್‌ಸ್ಟೈನ್ ಜತೆಗಿನ ನಂಟಿಗೆ ಸಂಬಂಧಿಸಿದಂತೆ, ಸರ್ಕಾರಿ ಹುದ್ದೆಯಲ್ಲಿದ್ದಾಗ ಅನುಚಿತವಾಗಿ ವರ್ತಿಸಿರುವ ಶಂಕೆಯ ಮೇರೆಗೆ ಆ್ಯಂಡ್ರ ಅವರನ್ನು ಗುರುವಾರ ಬಂಧಿಸಿ, 11 ತಾಸಿನ ಬಳಿಕ ಬಿಡುಗಡೆ ಮಾಡಲಾಯಿತು.
ಆ್ಯಂಡ್ರ ಅವರು ಶುಕ್ರವಾರ ಸ್ಯಾಂಡ್ರಿಗಮ್ ಎಸ್ಟೇಟ್‌ನಲ್ಲಿರುವ ನೂತನ ನಿವಾಸಕ್ಕೆ ಮರಳಿದರು. ಇದೇ ಸಂದರ್ಭದಲ್ಲಿ ಪೊಲೀಸರು ವಿಂಡ್ನರ್ ಕ್ಯಾಸಲ್‌ನಲ್ಲಿರುವ 30 ಕೋಣೆಗಳ ನಿವಾಸದಲ್ಲಿ ಶೋಧ ನಡೆಸಿದರು.
ಸರ್ಕಾರಿ ಹುದ್ದೆಯಲ್ಲಿದ್ದಾಗ ಅನುಚಿತ ವರ್ತನೆಯ ಜತೆಗೆ 2010ರಲ್ಲಿ ಸರ್ಕಾರದ ಕೆಲವು ಗೋಪ್ಯ ಮಾಹಿತಿಗಳನ್ನು ಎಪ್‌ಸ್ಟೈನ್ ಜತೆಗೆ ಆ್ಯಂಡ್ರ ಹಂಚಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯು ಬಿಡುಗಡೆ ಮಾಡಿದ ವರದಿಯಲ್ಲಿ ಆರೋಪಿಸಲಾಗಿದೆ.
ಎಪ್‌ಸ್ಟೈನ್ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಗಳನ್ನೂ ಆ್ಯಂಡ್ರ ನಿರಾಕರಿಸಿದ್ದಾರೆ.
