ಉದಯವಾಹಿನಿ, ಶಾರ್ಜಾ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರತೀಯ ವಲಸಿಗ ದಂಪತಿ ತಮ್ಮ ಮಗುವಿನ ಅಪಘಾತಕ್ಕೆ ಕಾರಣನಾದ ವ್ಯಕ್ತಿಗೆ ಕ್ಷಮಾದಾನ ಮಾಡಿದ ಅಪರೂಪದ ಮನಕಲಕುವ ಸಂಗತಿ ನಡೆದಿದೆ.
ಯುಎಇದಲ್ಲಿ ವಾಸಿಸುತ್ತಿದ್ದ ಭಾರತೀಯ ವಲಸಿಗ ದಂಪತಿ, ಶಾರ್ಜಾದಲ್ಲಿ ಕಳೆದ ವಾರ ತಮ್ಮ ಎರಡು ವರ್ಷದ ಮಗುವಿಗೆ ಆಕಸ್ಮಿಕವಾಗಿ ಕಾರು ಹೊಡೆದು ಮೃತಪಟ್ಟ ಚಾಲಕನನ್ನು ಕಾನೂನು ಶಿಕ್ಷೆಯಿಂದ ಕ್ಷಮಿಸಿದ್ದಾರೆ. 2ತಿಂಗಳ ಮಗು ಅಲನ್ ರೂಮಿ ಬುಧವಾರ ತಮ್ಮ ತಾಯಿಯೊಂದಿಗೆ ಕೇರಳದಿಂದ ಯುಎಇಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿತು. ಅಪಘಾತ ಸಂಜೆ 7 ಗಂಟೆಯ ನಂತರ ನಡೆದಿತ್ತು. ಅಪಘಾತವು ಮುವೈಲೆಹ್ ಪ್ರದೇಶದ ಅವರ ಮನೆಯ ಸುತ್ತಲಿನ ಮರಳು ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದೆ. ಮಗುವಿನೊಂದಿಗೆ ಇದ್ದ ತಾಯಿ ಕಸವನ್ನು ಹಾಕಲು ಪಾರ್ಕಿಂಗ್ ಲಾಟ್ ಗೆ ಹೋದಾಗ ಅಲನ್ ಆಟವಾಡುತ್ತ ಹಿಂಬಾಲಿಸಿದ್ದಾನೆ. ಪಕ್ಕದ ಮನೆಯವರು ತಮ್ಮ ಕಾರನ್ನು ಹೊರಗೆ ರಿವರ್ಸ್ ತೆಗೆಯುತ್ತಿದ್ದಾಗ ಪುಟ್ಟ ಮಗುವಿಗೆ ಹೊಡೆದಿದೆ.
ಮಗುವನ್ನು ನನಗೆ ಹಿಡಿಯಲಾಗಲಿಲ್ಲ. ಅವನು ಕಾರಿನ ಹತ್ತಿರ ಹೋದನು. ಚಾಲಕನು ಅವನನ್ನು ನೋಡಲಿಲ್ಲ. ಅದು ಕ್ಷಣದೊಳಗೇ ಸಂಭವಿಸಿತು. ಪರಿಸ್ಥಿತಿ ಕೈಮೀರಿ ಹೋಗಿತ್ತು ಎಂದು ತಾಯಿ ಭಯಾನಕ ಕ್ಷಣವನ್ನು ನೆನಪಿಸಿಕೊಂಡು ಹೇಳುತ್ತಾರೆ.ಕಾರು ಹೊಡೆದ ಚಾಲಕ ಅವರನ್ನು ತಕ್ಷಣದ ಪ್ರೈವೇಟ್ ಹಾಸ್ಪಿಟಲ್ ಗೆ ಕರೆದೊಯ್ದಿದ್ದಾರೆ. ವೈದ್ಯರು ಬಳಿಕ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಆದರೆ ಮಗುವನ್ನು ರಕ್ಷಿಸಲಾಗಲಿಲ್ಲ. ತೀವ್ರ ಪೆಟ್ಟಾಗಿ ಮೃತಪಟ್ಟಿದ್ದರು. ಮಗುವಿನ ಅಂತ್ಯಕ್ರಿಯೆ ದುಬೈಯಲ್ಲಿ ನೆರವೇರಿಸಿದ ಬಳಿಕ ಕುಟುಂಬವು ಕೇರಳಕ್ಕೆ ಹಿಂತಿರುಗಿದರು.
