ಉದಯವಾಹಿನಿ, ಮಾರ್ಚ್ ತಿಂಗಳು ಬೇಸಿಗೆಯ ಆರಂಭ. ತಾಪಮಾನ ಏರಿಕೆಯಾಗುವ ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಬೆಳೆದರೆ ಉತ್ತಮ ಫಲ ದೊರೆಯುತ್ತದೆ. ಮನೆಯ ಹಿತ್ತಲಲ್ಲಿ ಅಥವಾ ಮಡಕೆಗಳಲ್ಲಿ ಸುಲಭವಾಗಿ ಬೆಳೆಯಬಹುದಾದ ತರಕಾರಿಗಳಿವು.
ಸೌತೆ ಬಳ್ಳಿಯಾಗಿ ಬೆಳೆಯುವ ತರಕಾರಿ. ಮಡಕೆಯಲ್ಲಿ ಅಥವಾ ನೆಲದಲ್ಲಿ ಬಿತ್ತಬಹುದು. ನೀರು ನಿಲ್ಲದಂತೆ ಮಡಕೆಯಲ್ಲಿ ರಂಧ್ರ ಇರಬೇಕು. ಬಳ್ಳಿ ಹರಡುವುದರಿಂದ ಚಪ್ಪರ ಅಥವಾ ಸಪೋರ್ಟ್ ನೀಡಿದರೆ ಹೆಚ್ಚು ಕಾಯಿ ಬಿಡುತ್ತದೆ. ಮಾರ್ಚ್‌ನಲ್ಲಿ ಟೊಮ್ಯಾಟೊ ಸಸಿ ನೆಟ್ಟರೆ ಬೇರುಗಳು ಬೇಗನೆ ಬೆಳೆದು ಗಟ್ಟಿಯಾಗುತ್ತವೆ. ಪೋಷಕಾಂಶಯುಕ್ತ ಮಣ್ಣು ಬಳಸಬೇಕು. ಸಸಿಗೆ ಕೋಲು ಕಟ್ಟಿ ನಿಲ್ಲಿಸಿದರೆ ಉತ್ತಮ ಬೆಳವಣಿಗೆ ಕಂಡುಬರುತ್ತದೆ.
ಸೋರೆಕಾಯಿ ಬಳ್ಳಿಯಾಗಿ ವೇಗವಾಗಿ ಬೆಳೆಯುತ್ತದೆ. ಸಾಕಷ್ಟು ಜಾಗ ಬೇಕು. ನೆಲದಲ್ಲಿ ನೆಟ್ಟರೆ ಉತ್ತಮ ಬೆಳವಣಿಗೆ ಸಾಧ್ಯ.
ಹಸಿರು ಮೆಣಸನ್ನು ಮಡಕೆಯಲ್ಲೂ ಬೆಳೆಸಬಹುದು. ಹಾಗಲಕಾಯಿ ಹೆಚ್ಚು ಸೂರ್ಯನ ಬೆಳಕು ಬೇಡುವ ಬಳ್ಳಿ ಎರಡಕ್ಕೂ ಗೊಬ್ಬರ ಮತ್ತು ನಿಯಮಿತ ನೀರಾವರಿ ನೀಡಿದರೆ ಉತ್ತಮ ಫಲ ಸಿಗುತ್ತದೆ.

ಬೆಂಡೆಕಾಯಿ ಗಿಡಕ್ಕೆ ಹೆಚ್ಚಿನ ಉಷ್ಣತೆ ಅಗತ್ಯ ಆದ್ದರಿಂದ ಮಾರ್ಚ್ ಮೊದಲ ವಾರವೇ ಬೀಜ ಬಿತ್ತುವುದು ಒಳ್ಳೆಯದು. ಫಲವತ್ತಾದ ಮಣ್ಣಿನಲ್ಲಿ ನೇರವಾಗಿ ಬೀಜ ಬಿತ್ತಬಹುದು. ಸೂರ್ಯನ ಬೆಳಕು ಚೆನ್ನಾಗಿ ಬರುವ ಜಾಗದಲ್ಲಿ ಇಟ್ಟು, ನಿಯಮಿತವಾಗಿ ನೀರು ಹಾಕಬೇಕು. ಸುಮಾರು 40 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!