ಉದಯವಾಹಿನಿ, ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಪಾಕಿಸ್ತಾನ್ ಸೂಪರ್ ಲೀಗ್ 2026ರಲ್ಲಿ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿ ಹರಾಜಿನಲ್ಲಿ ಅವರ ಹೆಸರು ಕಾಣಿಸದಿದ್ದರೂ, ನೇರ ಒಪ್ಪಂದದ ಮೂಲಕ ಪಾಕಿಸ್ತಾನ ಸೂಪರ್ ಲೀಗ್ ಗೆ ಎಂಟ್ರಿ ನೀಡಿದ್ದಾರೆ.
ಮ್ಯಾಕ್ಸ್‌ವೆಲ್‌ರನ್ನು ಹೊಸ ಫ್ರಾಂಚೈಸಿಯಾದ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವು ಸೈನ್ ಮಾಡಿಕೊಂಡಿದೆ. ಇದಕ್ಕೂ ಮೊದಲು ಅವರು ಪೇಶಾವರ್ ಝಲ್ಟಿಪರ ಆಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಮಾತುಕತೆ ಅಂತಿಮ ಹಂತ ತಲುಪದ ಕಾರಣ ಆ ಒಪ್ಪಂದ ಕೈಗೂಡಲಿಲ್ಲ.
