ಉದಯವಾಹಿನಿ, ಶ್ರೀನಗರ: ಪಂಜಾಬ್ ಮತ್ತು ಕಾಶ್ಮೀರದಲ್ಲಿ 2 ಐಇಡಿಗಳು ಪತ್ತೆಯಾಗಿವೆ. ಅಮೃತಸರದ ರಯಾ ಪೊಲೀಸ್ ಠಾಣೆ ಬಳಿ ಅನುಮಾನಾಸ್ಪದ ಚೀಲದಲ್ಲಿ ಐಇಡಿ ಪತ್ತೆಯಾಗಿದೆ.
ಅನುಮಾನಾಸ್ಪದ ವಸ್ತು ಪತ್ತೆಯಾದ ನಂತರ ಬಾಂಬ್ ನಿಷ್ಕ್ರಿಯ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಸಿಬ್ಬಂದಿ ಅದನ್ನು ಐಇಡಿ ಎಂದು ದೃಢಪಡಿಸಿದರು. ನಂತರ ಅದನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಎಸ್‌ಎಸ್‌ಪಿ ಸೊಹೈಲ್ ಖಾಸಿಂ ಮಿರ್ ತಿಳಿಸಿದ್ದಾರೆ.
ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಸಫಾಪೋರಾದಲ್ಲಿ ಮತ್ತೊಂದು ಐಇಡಿ ಪತ್ತೆಯಾಗಿದೆ. ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಬಾಂಬ್ ಪತ್ತೆ ದಳ ಐಇಡಿಯನ್ನು ಪತ್ತೆಹಚ್ಚಿ ಅದನ್ನು ನಿಷ್ಕ್ರಿಯಗೊಳಿಸಿದೆ. ಈ ಎರಡೂ ಸ್ಫೋಟಕಗಳು ಫೆ.20 ರಂದು ಪತ್ತೆಯಾಗಿವೆ. ಇನ್ನೂ ಉತ್ತರ ಕಾಶ್ಮೀರದಲ್ಲಿ ಇತ್ತೀಚೆಗೆ ಪತ್ತೆಯಾದ ಮೂರನೇ ಐಇಡಿ ಇದಾಗಿದೆ. ತಂಗ್‌ಮರಾಗ್ ರಸ್ತೆಯಲ್ಲಿ ಮತ್ತು ಬಾರಾಮುಲ್ಲಾದಲ್ಲಿ ಒಂದು ಐಇಡಿ ಪತ್ತೆಯಾಗಿತ್ತು.
