ಉದಯವಾಹಿನಿ, ಬೆಂಗಳೂರು: ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರ ಒತ್ತಾಯದ ಪತ್ರ ಬಹಿರಂಗವಾಗಿದೆ. ಕಳೆದ ಅಧಿವೇಶನದ ವೇಳೆ ಹೊಸದಾಗಿ ಗೆದ್ದ ಕಾಂಗ್ರೆಸ್ ಶಾಸಕರು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಬೆಳಗಾವಿ, ಬೆಂಗಳೂರು ಅಧಿವೇಶನದಲ್ಲಿ ಮೂರ್ನಾಲ್ಕು ಹೊಸ ಶಾಸಕರ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆದಿತ್ತು ಎನ್ನಲಾಗಿದ್ದು, ಈಗ 31ಶಾಸಕರ ಸಹಿ ಇರುವ ಪತ್ರ ಈಗ ವೈರಲ್ ಆಗಿದೆ.

ದಿನಾಂಕ ಇಲ್ಲದ ಪತ್ರ ಬಿಡುಗಡೆ ಆಗಿದ್ದು, ಕಾಂಗ್ರೆಸ್ ಒಳಗೆ ಕುತೂಹಲ ಹೆಚ್ಚಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ 38 ಶಾಸಕರು‌ ಹೊಸದಾಗಿ ಗೆದ್ದಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಸಿಎಂ ಆಗಿದ್ದಾರೆ. ಮೊದಲ ಬಾರಿ ಗೆದ್ದ ಶಾಸಕರಿಗೂ ಸಚಿವ ಸ್ಥಾನ ನೀಡಿ ಅವಕಾಶ ಕೊಡಬೇಕು. ಕನಿಷ್ಠ 5 ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?: ಕರ್ನಾಟಕದಲ್ಲಿ ಹೊಸ ಮುಖಗಳನ್ನು ಜನರು ಬಯಸಿದ್ದರು. ಹಾಗಾಗಿ ಕಾಂಗ್ರೆಸ್ ನಲ್ಲಿ 38 ಹೊಸ ಮುಖಗಳನ್ನ ಗೆಲ್ಲಿಸಿದ್ದರು. ಆದರೆ ಕ್ಯಾಬಿನೆಟ್ ನಲ್ಲಿ ಒಬ್ಬರೇ ಒಬ್ಬ ಮೊದಲ ಸಲ ಗೆದ್ದ ಶಾಸಕರಿಗೆ ಅವಕಾಶ ಸಿಕ್ಕಿಲ್ಲ.‌ ಸಚಿವ ಸಂಪುಟ ಪುನಾರಚನೆ ಮಾಡಿ ಮೊದಲ ಬಾರಿ ಗೆದ್ದ ಕನಿಷ್ಠ 5 ಶಾಸಕರಿಗೆ ಅವಕಾಶ ಕೊಡಿ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿ ಗೆದ್ದವರು ಸಿಎಂ ಆಗಿದ್ದಾರೆ. ಹಾಗಾಗಿ 2028ರ ಚುನಾವಣೆಯ ದೃಷ್ಟಿಯಿಂದ ಮೊದಲ ಬಾರಿ ಗೆದ್ದ ಶಾಸಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!