ಉದಯವಾಹಿನಿ, ವಿಸ್ಪರ್ಸ್ ಆಫ್ ದಿ ರಿವರ್, ಇದೊಂದು ಅಪರೂಪದ ಸಾಮಾಜಿಕ ಚಿತ್ರ. ಸ್ಯಾಂಡಲ್‌ವುಡ್‌ನಲ್ಲಿ ತರಹೇವಾರಿ ಸಿನಿಮಾಗಳು ಬರ್ತಿವೆ. ಲವ್, ಕ್ರೈಮ್, ಸಸ್ಪೆನ್ಸ್, ಹಾರರ್ ಹೀಗೆ ಅನೇಕ ಜಾನರ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಎಲ್ಲಾ ಸಿನಿಮಾಗಳ ಮಧ್ಯೆ ಇದೀಗ ವಿಭಿನ್ನ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ವಿಸ್ಪರ್ಸ್ ಆಫ್ ದಿ ರಿವರ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಕೆ.ಪ್ರಭಾಕರನ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ. ಮಂಜುನಾಥ್ ಪೈ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಜೊತೆಗೆ ಮಂಜುನಾಥ್ ಪೈ ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ಸ್ನೇಹಿತರಾದ ರಾಧಾಕೃಷ್ಣ ಪೈ, ವಿವೇಕ್ ವಿನ್ಸೆಂಟ್, ಶ್ರೀರಾಮ್ ಸಿ ಸೇರಿ Meena’s Studio ಬ್ಯಾನರ್ ಅಡಿಯಲ್ಲಿ ನಿರ್ಮಿಲಾಗಿದೆ. ಈ ಸಿನಿಮಾವನ್ನು ರೈತರ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವೃತ್ತಿಪರರು, ಸಿನಿಮಾ ತಂತ್ರಜ್ಞರು ಮತ್ತು ನಾಟಕ ಕಲಾವಿದರೆಲ್ಲರು ಒಟ್ಟಿಗೆ ಸೇರಿ ರೂಪಿಸಿದ್ದಾರೆ. ನದಿಗಳೊಂದಿಗೆ ನಮ್ಮ ಸಂಬಂಧವನ್ನು ಮರುಪರಿಶೀಲಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ನದಿಗಳನ್ನು ಉಳಿಸುವ ಬಗ್ಗೆ ಭಾವನಾತ್ಮಕವಾಗಿ ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಪ್ರಿಮಿಯರ್ ಶೋಗಳಲ್ಲಿ ಸಿನಿ ಗಣ್ಯರು ಹಾಗೂ ಪ್ರೇಕ್ಷಕರಿಂದ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
