ಉದಯವಾಹಿನಿ, ಬೆಂಗಳೂರು: ಕಾಲಿಗೆ ಬಿದ್ದು ಕೈ ಮುಗಿದರೂ ಬಿಡಲಿಲ್ಲ.. ‘ಅಪ್ಪ-ಅವ್ವ’ ಬಿಟ್ಟು ಬಿಡಿ ಎಂದರೂ ಬಿಡದೆ ಎಣ್ಣೆ ಪಾರ್ಟಿ ಮಾಡ್ತಿದ್ದ ರೌಡಿ ಗ್ಯಾಂಗ್ ಯುವಕರಿಬ್ಬರಿಬ್ಬನ್ನ ಥಳಿಸಿರೊ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಮಂಡ್ಯ ನಂತರ ಬೆಂಗಳೂರಲ್ಲಿ ಮತ್ತೆ ಈ ಹೇಯ ಕೃತ್ಯ ನಡೆದಿದ್ದು, ವೀಡಿಯೊ ವೈರಲ್ ಆಗಿದೆ.
ಮಂಡ್ಯದಲ್ಲಿ ಯುವಕನ ಮೇಲೆ ನಡೆದ ಕ್ರೂರ ಹಲ್ಲೆ ಪ್ರಕರಣ ಮಾಸುವ ಬೆನ್ನಲ್ಲೇ ಬೆಂಗಳೂರಿನ ಹೊರವಲಯದಲ್ಲಿ ಮತ್ತೊಂದು ಮೃಗೀಯ ಕೃತ್ಯ ಬೆಳಕಿಗೆ ಬಂದಿದೆ. ರೌಡಿ ಗ್ಯಾಂಗ್‌ನಿಂದ ಇಬ್ಬರು ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ವಿಡಿಯೊ ವೈರಲ್ ಆಗಿದೆ. ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಗುಡ್ಡೆಯ ಬಾಳೆಕೆರೆ ಏರಿ ಮೇಲೆ ನಡೆದ ಘಟನೆಯಲ್ಲಿ ಪುನೀತ್ ಮತ್ತು ರಫೆಲ್ ಆಂಥೋನಿ ಎಂಬ ಯುವಕರ ಮೇಲೆ ರೌಡಿ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ದಮ್ಮಯ್ಯ ಬಿಟ್ಟುಬಿಡಿ, ಅಪ್ಪ-ಅವ್ವ, ಕಾಲಿಗೆ ಬೀಳುತ್ತೇನೆ ಬಿಟ್ಟುಬಿಡಿ ಎಂದು ಬೇಡಿಕೊಂಡರೂ, ರೌಡಿ ಪಟಾಲಂ ಬಿಡದೇ ಕ್ರೂರವಾಗಿ ಥಳಿಸಿದ್ದಾರೆ. ಒಂದೇ ದಿನ ಇಬ್ಬರ ಮೇಲೆ ನಡೆದ ಈ ದಾಳಿಯಿಂದ ರೌಡಿಗಳ ಉಪಳ ಎಷ್ಟಿದೆ ಅನ್ನೋದಕ್ಕೆ ಇದು ತಾಜಾ ನಿದರ್ಶನವಾಗಿದೆ.
ಇದೇ ತಿಂಗಳ 22ರ ಮಧ್ಯಾಹ್ನ, ರೌಡಿಶೀಟರ್‌ಗಳಾದ ಕೋಳಿ ಫಾರಂ ಗಜ, ಆಂಥೋನಿ ಸೈಮನ್, ವಿನಯ್ ಅಂಡ್ ಗ್ಯಾಂಗ್ ಬಾಳೆಕೆರೆ ಏರಿ ಮೇಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ, ಹಳೇ ದ್ವೇಷದ ಹಿನ್ನೆಲೆಯಲ್ಲಿ ಪುನೀತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಪುನೀತ್, ರೌಡಿ ಆಂಥೋನಿ ಸೈಮನ್‌ಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದನಂತೆ. ಇದೇ ಕಾರಣಕ್ಕೆ ಪುನೀತ್‌ನನ್ನ ಕೆರೆ ಏರಿ ಮೇಲೆ ಎಳೆದುಕೊಂಡು ಬಂದು, ಚಾಕು ಮತ್ತು ದೊಣ್ಣೆಗಳಿಂದ ಮನಸೋ ಇಚ್ಛೆ ಥಳಿಸಿದ್ದಾರೆ
