ಉದಯವಾಹಿನಿ, ಇಸ್ಲಮಾಬಾದ್ : ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ ಹಗರಣವೊಂದು ಬೆಳಕಿಗೆ ಬಂದಿದೆ. ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ತನ್ನ ನ್ಯಾಯಾಧೀಶರಲ್ಲಿ ಒಬ್ಬರಾದ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನು ವಜಾಗೊಳಿಸುವ ಕುರಿತು ವಿವರವಾದ 116 ಪುಟಗಳ ತೀರ್ಪನ್ನು ನೀಡಿದೆ. ಪಾಕಿಸ್ತಾನದ ನ್ಯಾಯಾಧೀಶರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಅವರು ನಕಲಿ ಕಾನೂನು ಪದವಿ ಹೊಂದಿದ್ದಾರೆಂದು ಯಾರಿಗೂ ತಿಳಿಯದಂತೆ ತೀರ್ಪುಗಳನ್ನು ನೀಡಿದ್ದರು.
ನ್ಯಾಯಮೂರ್ತಿ ತಾರಿಕ್ ಮಹಮೂದ್ ಜಹಾಂಗಿರಿ 5 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿದ್ದರೂ ಅವರು ಕಾನೂನು ಪದವಿಯನ್ನು ಹೊಂದಿರಲಿಲ್ಲ. ಆದ್ದರಿಂದ, ಹೈಕೋರ್ಟ್ ನ್ಯಾಯಾಧೀಶರಾಗಿ ಅವರ ನೇಮಕಾತಿ ಕಾನೂನುಬದ್ಧವಾಗಿ ಅಮಾನ್ಯವಾಗಿದೆ. ಇಸ್ಲಮಾಬಾದ್ ಹೈಕೋರ್ಟ್ ಫೆಬ್ರವರಿ 23ರ ಸೋಮವಾರದಂದು ವಿವರವಾದ 116 ಪುಟಗಳ ತೀರ್ಪನ್ನು ನೀಡಿತು. ಹೈಕೋರ್ಟ್ ನ್ಯಾಯಾಧೀಶರಲ್ಲಿ ಒಬ್ಬರಾದ ಅವರನ್ನು ಜಡ್ಜ್ ಹುದ್ದೆಯಿಂದ ತೆಗೆದುಹಾಕಲಾಗಿದೆ. ಜಹಾಂಗಿರಿ ಅವರನ್ನು ಡಿಸೆಂಬರ್ 2020ರಲ್ಲಿ ಹೈಕೋರ್ಟ್‌ಗೆ ನೇಮಿಸಲಾಗಿತ್ತು. ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರಾಗಿ ನ್ಯಾಯಾಂಗ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಿಷೇಧಿಸಲಾಯಿತು.

Leave a Reply

Your email address will not be published. Required fields are marked *

error: Content is protected !!