ಉದಯವಾಹಿನಿ, ಕೆನಡಾ : 2008ರ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನ ಪೌರತ್ವವನ್ನು ರದ್ದುಗೊಳಿಸುವ ನಿರ್ಧಾರವನ್ನು ಕೆನಡಾ ಸರ್ಕಾರ ತೆಗೆದುಕೊಂಡಿದೆ. ರಾಣಾ ತಮ್ಮ ಪೌರತ್ವ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಕೆನಡಾ ಪ್ರಧಾನಿ ಮಾರ್ಕ್​ ಕಾರ್ನಿ ಭಾರತ ಭೇಟಿಗೂ ಮುನ್ನ ಕೆನಡಾ ಸರ್ಕಾರ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.
ಭಾರತ ಭೇಟಿಗೆ ಮುನ್ನ ಕೆನಡಾ ಸರ್ಕಾರ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಪಾಕಿಸ್ತಾನ ಮೂಲದ ಉದ್ಯಮಿ ತಹಾವ್ವೂರ್ ರಾಣಾ ಅವರ ಕೆನಡಾ ಪೌರತ್ವವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
64 ವರ್ಷದ ರಾಣಾ 1997 ರಲ್ಲಿ ಕೆನಡಾಕ್ಕೆ ವಲಸೆ ಬಂದು 2001 ರಲ್ಲಿ ಕೆನಡಾದ ಪೌರತ್ವವನ್ನು ಪಡೆದಿದ್ದ. ಈತ 26/11 ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅವರ ಆಪ್ತ ಸಹಚರ ಎಂದು ಹೇಳಲಾಗಿದೆ. ಆತನನ್ನು ಏಪ್ರಿಲ್ 2025 ರಲ್ಲಿ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು. ನವದೆಹಲಿಗೆ ಆಗಮಿಸಿದ ನಂತರ, ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.

ಕೆನಡಾದ ವಲಸೆ ಇಲಾಖೆಯು ರಾಣಾನ ಪೌರತ್ವವನ್ನು ರದ್ದುಗೊಳಿಸಲಾಗುತ್ತಿರುವುದು ಭಯೋತ್ಪಾದನಾ ಆರೋಪಗಳಿಂದಲ್ಲ, ಬದಲಾಗಿ ಅವರು ಸುಳ್ಳು ಮಾಹಿತಿ ನೀಡಿದ್ದರಿಂದ ಎಂದು ಸ್ಪಷ್ಟಪಡಿಸಿದೆ. ಇಲಾಖೆಯ ಪ್ರಕಾರ, ರಾಣಾ ತಮ್ಮ ಅರ್ಜಿಯಲ್ಲಿ ಸುಳ್ಳು ಹೇಳಿದ್ದಾರೆ. ಅವರು ಒಟ್ಟಾವಾ ಮತ್ತು ಟೊರೊಂಟೊದಲ್ಲಿ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಕೇವಲ ಆರು ದಿನಗಳ ಕಾಲ ದೇಶದಿಂದ ಹೊರಗಿದ್ದೆ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!