ಉದಯವಾಹಿನಿ, ಜೆರುಸಲೇಂ : ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಇಸ್ರೇಲ್ ಪ್ರವಾಸದಲ್ಲಿರಲಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಸಂಸತ್ನಲ್ಲಿ ತ್ರಿವರ್ಣ ದೀಪಗಳು ಕಂಗೊಳಿಸಿವೆ. ಪ್ರಧಾನಿ ಮೋದಿ ಫೆಬ್ರವರಿ 26ರಂದು ಇಸ್ರೇಲ್ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದು, ಜೆರುಸಲೇಂ ಪೋಸ್ಟ್​​ನ ಮುಖಪುಟದಲ್ಲಿ ಪ್ರಧಾನಿಯದ್ದೇ ಸುದ್ದಿ ಪ್ರಕಟವಾಗಿದೆ.
ಇದಕ್ಕೂ ಮೊದಲು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 2015 ರಲ್ಲಿ ಸಂಸತ್ತನ್ನುದ್ದೇಶಿಸಿ ಮಾತನಾಡಿದ್ದರು. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಈ ಭೇಟಿ ತುಂಬಾ ಮಹತ್ವದ್ದಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತೆರಳುತ್ತಿದ್ದಾರೆ. ಪ್ರಧಾನಿ ಮೋದಿ ಫೆಬ್ರವರಿ 26ರಂದು ಸಂಸತ್ತು ಉದ್ದೇಶಿಸಿ ಮಾತನಾಡಲಿದ್ದಾರೆ.

ಇಸ್ರೇಲ್ ಸಂಸತ್ತಿನ ಸ್ಪೀಕರ್ ಅಮೀರ್ ಒಹಾನಾ ನೆಸ್ಸೆಟ್‌ನ ಫೋಟೋವನ್ನು ಹಂಚಿಕೊಂಡು, ಇಂದು ರಾತ್ರಿ, ನೆಸ್ಸೆಟ್ ಅನ್ನು ಭಾರತೀಯ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಗುತ್ತದೆ, ಇದು ಪ್ರಧಾನಿ ಮೋದಿಗೆ ನಾವು ಕೊಡುತ್ತಿರುವ ಗೌರವ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯನ್ನು ಇಸ್ರೇಲ್ ಸಂಸತ್ತು, ನೆಸ್ಸೆಟ್‌ನಿಂದ ಹಿಡಿದು ಪ್ರಮುಖ ಪತ್ರಿಕೆಗಳವರೆಗೆ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!