ಉದಯವಾಹಿನಿ : ಯಾರೇ ಆಗಿರಲಿ ದೇವರಿಗೆ ಉಪವಾಸ ಮಾಡುವಾಗ ಕೆಲವೊಮ್ಮೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ನಾವು ಅಂದುಕೊಂಡಿದ್ದನ್ನ ಸಾಧಿಸುವುದಕ್ಕಾಗಿ ಉಪವಾಸ ಇರುವಾಗ ಹೈಡ್ರೇಟೆಡ್ ಹಾಗೂ ಆರೋಗ್ಯವಾಗಿರಬೇಕು. ಉಪವಾಸದಿಂದ ದೇಹದಲ್ಲಿ ಶಕ್ತಿಯನ್ನು ಕಳೆದುಕೊಂಡು ಗ್ಯಾಸ್ಟಿಕ್, ಅಜೀರ್ಣತೆಯಂತಹ ಸಮಸ್ಯೆಗಳು ಕಾಡುತ್ತವೆ. ಹೀಗೆ ಆಗಬಾರದು ಎಂದರೆ, ಇನ್ನೊಮ್ಮೆ ಉಪವಾಸ ಇರುವಾಗ ಈ ಪಾನೀಯ ಅಥವಾ ಜೂಸ್‌ಗಳನ್ನು ಕುಡಿದು ನೋಡಿ. ನಿಮಗೆ ಯಾವುದೇ ಸಮಸ್ಯೆಗಳು ಬರುವುದೇ ಇಲ್ಲ. ಅವು ಯಾವುವು ಎನ್ನುವ ಮಾಹಿತಿ ಇಲ್ಲಿದೆ.
ದೇವರಿಗೆ ಪೂಜೆ-ಪುನಸ್ಕಾರ, ಪ್ರಾರ್ಥನೆ ಅಂತ ದಿನ ಪೂರ್ತಿ ಉಪವಾಸ ಇರುವಾಗ ದಿನದಲ್ಲಿ ಯಾವುದಾದರೂ ಜೂಸ್ ಕುಡಿಯುವುದು ಉತ್ತಮ. ದಿನವಿಡೀ ಹೊಟ್ಟೆ ಖಾಲಿ ಇರಲು ಆಗುವುದಿಲ್ಲ. ಏಕೆಂದರೆ ನಾವು ಚಿಕ್ಕವರಿಂದ ಯಾವ ರೀತಿ ಆಹಾರ ತೆಗೆದುಕೊಂಡಿರುತ್ತೇವೆಯೋ ಅದೇ ಹೊಟ್ಟೆಗೆ ರೂಢಿಯಾಗಿರುತ್ತದೆ. ಹೀಗಾಗಿ ಉಪವಾಸ ಇದ್ದಗಲೂ ಸರಿಯಾದ ಪೋಷಣೆ ಅತ್ಯಗತ್ಯ. ಈ ಪಾನೀಯಗಳು ಖಾಲಿ ಹೊಟ್ಟೆಯಿಂದ ಆಗುವ ತೊಂದರೆಗಳನ್ನ ನಿವಾರಣೆ ಮಾಡುತ್ತವೆ.
ಖರ್ಜೂರ ಹಾಲು ಈ ಎರಡನ್ನು ಕುದಿಸಿ ಕುಡಿಯುವುದರಿಂದ ದೇಹಕ್ಕೆ ಬೇಗನೇ ಶಕ್ತಿ ಬರುತ್ತದೆ. ಸಮಸ್ಯೆಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತವೆ. ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ಆದ್ದರಿಂದ ಅಧಿಕ ಸಕ್ಕರೆ ಅಗತ್ಯವಿಲ್ಲ. ಖರ್ಜೂರವು ಫೈಬರ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಖರ್ಜೂರವನ್ನು ಹಾಗೇ ತಿನ್ನಬಹುದು ಅಥವಾ ಹಾಲಿನ ಜೊತೆಗೆ ಕುದಿಸಿ ಕುಡಿಯಬಹುದು. ನೀವು ಉಪವಾಸ ಇರುವಾಗ ಮಜ್ಜಿಗೆ ಕುಡಿದರೆ ಅತ್ಯುತ್ತಮವಾಗಿರುತ್ತದೆ. ಮಜ್ಜಿಗೆಗಿಂತ ಒಳ್ಳೆಯದು ಯಾವುದು ಇಲ್ಲ ಎನ್ನಬಹುದು. ಸ್ವಲ್ಪ ಉಪ್ಪು, ಜೀರಿಗೆ ಹಾಗೂ ಪುದೀನವನ್ನು ಮಜ್ಜಿಗೆಗೆ ಹಾಕಿ ಕುಡಿಯುವುದರಿಂದ ಹೊಟ್ಟೆ ತಂಪಾಗಿರುತ್ತದೆ. ಇದು ಬೇಡ ಎಂದರೆ ನಿಂಬೆಹಣ್ಣಿನ ಜೂಸ್ ಕೂಡ ಒಳ್ಳೆಯದೇ ಅಗಿದೆ. ನಿಂಬೆ ರಸ ಹಾಗೂ ಪುದೀನವನ್ನು ಸೇರಿಸಿ ಶರಬತ್ತು ಮಾಡಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತೆ, ದೇಹವು ಉಲ್ಲಾಸವಾಗಿರುತ್ತದೆ.
