ಉದಯವಾಹಿನಿ, ಕಲಬುರಗಿ/ಯಾದಗಿರಿ: ಶಹಾಪುರ ತಾಲೂಕಿನ ಮಹಲರೋಜ್ ಮಲ್ಲಿಕಾರ್ಜುನ ಮುತ್ಯಾ ಬಾಲಕಿಯನ್ನ ತನ್ನ ತೊಡೆ ಮೇಲೆ ಕೂಡಿಸಿಕೊಂಡು ಮುದ್ದಿಸಿರುವ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ವೈರಲ್ ಆದ ವಿಡಿಯೋ ಕುರಿತು ʻಮಲ್ಲಿಕಾರ್ಜುನ ಮುತ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕಿ ಇರುವ ವಿಡಿಯೋ ಎಲ್ಲೆಡೆ ಹರಿಬಿಟ್ಟಿರೋದು ತಪ್ಪು. ಇದರಿಂದ ಆ ಕುಟುಂಬಕ್ಕೆ ನಷ್ಟವಾಗಿದೆ. ಆ ಬಾಲಕಿ ನನ್ನ ಮಗಳು ಇದ್ದಂತೆ, ಒಬ್ಬ ತಂದೆ ಮಗಳ ಜೊತೆ ಹೇಗೆ ಇರ್ತಾರೋ ಅದೇ ರೀತಿ ನಾನು ನಡೆದುಕೊಂಡಿದ್ದೇನೆ. ತಂದೆ ಮಗಳನ್ನ ಪ್ರೀತಿ ಮಾಡಲ್ವಾ? ತಂದೆ ಮಗಳನ್ನ ಪ್ರೀತಿ ಮಾಡೋದೇ ತಪ್ಪಾ ಅಂತ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬುದು ಮುಖ್ಯ ಅಲ್ಲ. ಆ ಬಾಲಕಿಯನ್ನ ಬಳಸಿಕೊಂಡು ಈ ರೀತಿ ಮಾಡಿರೋದು ತಪ್ಪು. ಸರ್ಕಾರ ಏನ ಕ್ರಮ ತೆಗೆದುಕೊಳ್ಳುತ್ತೆ ಅದಕ್ಕೆ ನಾನು ಸಿದ್ಧ. ಪೊಲೀಸರು ನನ್ನನ್ನ ತನಿಖೆಗೆ ಕರೆದ್ರೆ ಖಂಡಿತಾ ಹೋಗುತ್ತೇನೆ, ಎಲ್ಲಾ ರೀತಿಯಿಂದಲೂ ತನಿಖೆಗೆ ಸಹಕರಿಸುತ್ತೇನೆ. ಇದು ನಮ್ಮದೇ ಹೋರಾಟ, ಕಾನೂನು ಹೋರಾಟದಲ್ಲಿ ಜಯವಾಗಲಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ವೀಡಿಯೋದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತದೆ, ಮಠದ ಭಕ್ತರು ಇದಕ್ಕೆ ತಲೆ ಕೆಡಿಕೊಳ್ಳಬೇಡಿ ಎಂದಿದ್ದಾರೆ.
