ಉದಯವಾಹಿನಿ, ಹೈದರಾಬಾದ್: ತೆಲಂಗಾಣದಲ್ಲಿ ಹಿರಿಯ ನೈರ್ಮಲ್ಯ ಕಾರ್ಮಿಕರು ತಿಂಗಳಿಗೆ ಸುಮಾರು 2 ಲಕ್ಷ ರೂ. ಸಂಬಳ ಪಡೆಯುತ್ತಿರುವ ವಿಚಾರ ಬಳಕಿಗೆ ಬಂದಿದೆ. ಹೌದು. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿರುವ ಹಿರಿಯ ನೈರ್ಮಲ್ಯ ಕಾರ್ಮಿಕರು ದೀರ್ಘ ವರ್ಷಗಳ ಸೇವೆ ಮತ್ತು ಪರಿಷ್ಕರಣೆಗಳ ನಂತರ ತಿಂಗಳಿಗೆ ಸುಮಾರು 2 ಲಕ್ಷ ರೂ. ಸಂಬಳ ಪಡೆದರೆ ಉನ್ನತ ಸರ್ಕಾರಿ ಎಂಜಿನಿಯರ್‌ಗಳು ತಿಂಗಳಿಗೆ 7 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ.

ತೆಲಂಗಾಣದಲ್ಲಿ ಅತಿ ಹೆಚ್ಚು ವೇತನ ತೆಲಂಗಾಣ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್ , ತೆಲಂಗಾಣ ರಾಜ್ಯ ಪ್ರಸರಣ ನಿಗಮ ಲಿಮಿಟೆಡ್ ಮತ್ತು ಗಳಾದ ತೆಲಂಗಾಣ ಸದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ ಮತ್ತು ತೆಲಂಗಾಣ ನಾರ್ದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್‌ನ ಮುಖ್ಯ ಎಂಜಿನಿಯರ್‌ಗಳಿಗೆ ಸಿಗುತ್ತಿದೆ. ತೆಲಂಗಾಣದ ಸಂಬಳ ಮತ್ತು ಪಿಂಚಣಿ ಏರಿಕೆಯಾಗಿದ್ದು ಬಜೆಟ್‌ಗೆ ಭಾರೀ ಹೊರೆಯಾಗಿದೆ. ರಾಜ್ಯವು ಈಗ ಪ್ರತಿ ತಿಂಗಳು ಸುಮಾರು 6,000 ಕೋಟಿ ರೂ.ಗಳನ್ನು ವೇತನ ಮತ್ತು ಪಿಂಚಣಿಗಾಗಿ ಖರ್ಚು ಮಾಡುತ್ತಿದೆ. 2014 ರಲ್ಲಿ ರಾಜ್ಯ ರಚನೆಯ ಸಮಯದಲ್ಲಿ ಖರ್ಚು ಮಾಡಿದ್ದಕ್ಕಿಂತ ಸುಮಾರು ನಾಲ್ಕು ಪಟ್ಟು ಏರಿಕೆಯಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!