ಉದಯವಾಹಿನಿ, ಪಣಜಿ: ಗೋವಾದಲ್ಲಿ ಸಂಭವಿಸಿರುವ ಮಹೀಂದ್ರ ಥಾರ್ ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮೊನ್ನೆ ನಡೆದ ಅಪಘಾತದಲ್ಲಿ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ದೆಹಲಿಯ 19 ವರ್ಷದ ಯುವಕನ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಆದರೆ ಅಪಘಾತದ ವೇಳೆ ಯುವತಿ ಥಾರ್ ಡ್ರೈವ್ ಮಾಡ್ತಿದ್ದು, ಆಕೆಯನ್ನು ಬಚಾವ್ ಮಾಡಲು ಯುವಕ ಹೊಣೆ ಹೊತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಥಾರ್ ಜೀಪಿನಲ್ಲಿ ಯುವಕನ ಜೊತೆ ಮೂವರು ಯುವತಿಯರು ಇದ್ದರು. ಐ-20 ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಮಗು ಹಾಗು ಮತ್ತಿಬ್ಬರಿಗೆ ಗಾಯವಾಗಿತ್ತು.  ಡ್ರೈವರ್ ಸೀಟ್ ಅದಲು-ಬದಲು?: ಪೊಲೀಸರ ಎಫ್‌ಐಆರ್‌ನಲ್ಲಿ ಶೌರ್ಯ ಗೋಯಲ್ ಹೆಸರಿದ್ದರೂ, ಸ್ಥಳೀಯ ಪ್ರತ್ಯಕ್ಷದರ್ಶಿಗಳು ಯುವತಿ ಥಾರ್ ಚಲಾಯಿಸುತ್ತಿದ್ದಳು ಎಂದು ಹೇಳಿದ್ದಾರೆ. ಅಪಘಾತವಾದ ತಕ್ಷಣ ಕಾರನ್ನು ಒಬ್ಬ ಯುವತಿ ಚಲಾಯಿಸುತ್ತಿದ್ದಳು. ಡಿಕ್ಕಿಯಾದ ಕೂಡಲೇ ಸೀಟುಗಳನ್ನು ಬದಲಾಯಿಸಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!