ಉದಯವಾಹಿನಿ, ಪೂರ್ವ ಗೋದಾವರಿ, ಆಂಧ್ರಪ್ರದೇಶ: ಮಣ್ಣು ಯಾವಾಗಲೂ ಸಸ್ಯಗಳ ಬೆಳವಣಿಗೆಗೆ ಬೆನ್ನೆಲುಬಾಗಿದೆ. ಮಣ್ಣಿನಲ್ಲಿ ಲಭ್ಯ ಇರುವ ಪೋಷಕಾಂಶಗಳನ್ನು ಬಳಸಿಕೊಂಡು ಹಸಿರು ಸಸ್ಯಗಳು ದ್ಯುತಿಸಂಶ್ಲೇಷಣೆಯ ಮೂಲಕ ತಮ್ಮ ಆಹಾರವನ್ನು ಸಿದ್ಧಪಡಿಸುತ್ತವೆ. ರಾಷ್ಟ್ರೀಯ ಮನ್ನಣೆ ಗಳಿಸಿರುವ ಕಡಿಯಂ ನರ್ಸರಿಗಳು ಪ್ರತಿ ವರ್ಷ ಕೆಲವು ಲಕ್ಷ ಸಸ್ಯಗಳನ್ನು ಬೆಳೆಯುತ್ತವೆ. ಆದರೆ, ಸೂಕ್ತವಾದ ಮಣ್ಣಿನ ಲಭ್ಯತೆ ಇಲ್ಲದ ಕಾರಣ ಇಲ್ಲಿನ ಬೆಳೆಗಾರರು ಈಗ ಗಂಭೀರ ಸವಾಲನ್ನು ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಸ್ಯಗಳನ್ನು ಬೆಳೆಸಲು ಮಣ್ಣಿನ ಪರ್ಯಾಯಗಳ ಬಗ್ಗೆ ವಿಶೇಷವಾಗಿ ತೆಂಗಿನಕಾಯಿ ನಾರಿನ ಪುಡಿ( ಕೊಕೊ ಪೀಟ್) ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಈ ಬಗೆಗಿನ ವಿವರವನ್ನು ವೇಮಗಿರಿಯ ಹೂ ಸಂಶೋಧನಾ ಕೇಂದ್ರದ ವಿಜ್ಞಾನಿ ಎಂ. ಲಕ್ಷ್ಮಿಪತಿ ಅವರು ಹಂಚಿಕೊಂಡಿದ್ದಾರೆ.
ಸಸ್ಯಗಳ ಉತ್ಕೃಷ್ಟ ಬೆಳವಣಿಗೆಗೆ ಉತ್ತರದ ಮಣ್ಣು: ಸಸ್ಯಗಳನ್ನು ಬೆಳೆಸಲು ಮಣ್ಣು ಬೇಕೇಬೇಕು. ಅದರಲ್ಲೂ ಸಸಿಗಳ ಬೆಳವಣಿಗೆಗೆ ಯೋಗ್ಯವಾದ ಮಣ್ಣು ಸ್ಥಳೀಯವಾಗಿ ಸಾಕಷ್ಟು ಲಭ್ಯವಿಲ್ಲದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಮಣ್ಣನ್ನು ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಒಂದೊಮ್ಮೆ ಹೀಗೆ ತರಿಸುವ ಮಣ್ಣು ಕೀಟಗಳಿಂದ ಕೂಡಿದ್ದರೆ ಅದು ಸಸ್ಯ ಬೆಳವಣಿಗೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಎಲೆ ಸುರುಳಿ ಮತ್ತು ಹಳದಿ ಚುಕ್ಕೆಗಳಂತಹ ಕೀಟಗಳು ವೇಗವಾಗಿ ಹರಡಬಹುದು. ಇದು ಅನಿವಾರ್ಯವಾಗಿ ನಷ್ಟಕ್ಕೆ ಕಾರಣವಾಗುತ್ತದೆ ಎಂದು ವಿಜ್ಞಾನಿ ಲಕ್ಷ್ಮಿಪತಿ ವಿವರಿಸಿದರು.
ಕಡಿಯಂ, ಅಲಮುರು, ರಾಜಮಂಡ್ರಿ ಗ್ರಾಮೀಣ, ಪ್ರತಿಪಾಡು, ಅಮಲಪುರಂ, ಅಂಬಾಜಿಪೇಟೆ ಮತ್ತು ಆತ್ರಯಪುರಂನಂತಹ ಮಂಡಲಗಳಲ್ಲಿ ಹೂವಿನ ತೋಟಗಳನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಮಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು, ಸಂಶೋಧನಾ ಕೇಂದ್ರವು ಕಳೆದ ಎರಡು ವರ್ಷಗಳಿಂದ ಪರ್ಯಾಯ ಬೆಳೆಯುವ ವಸ್ತುಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.
ಕೊಕೊ – ಪೀಟ್ ಮತ್ತು ಇತರ ಪರ್ಯಾಯಗಳು: ನಾವು ಪೇಪರ್ ಗಿರಣಿ ಕೆಸರು, ತಾಳೆ ಎಣ್ಣೆ ತ್ಯಾಜ್ಯ ಮತ್ತು ಕೊಕೊ-ಪೀಟ್ ಜೊತೆಗೆ ಭತ್ತದ ಹೊಟ್ಟು ಮತ್ತು ವರ್ಮಿಕಾಂಪೋಸ್ಟ್ ಬಳಸಿ ಕೆಲವು ವಿಧದ ಸಸ್ಯಗಳನ್ನು ಬೆಳೆಸುತ್ತಿದ್ದೇವೆ. ಈ ಸಸ್ಯಗಳ ಬೆಳವಣಿಗೆಗೆ ತುಂಬಾ ಉತ್ತಮವಾಗಿದೆ. ಅನೇಕ ದೇಶಗಳು ಈಗಾಗಲೇ ಕೊಕೊ-ಪೀಟ್ ಬಳಸಿ ಪ್ರೋತ್ಸಾಹದಾಯಕ ಫಲಿತಾಂಶಗಳನ್ನು ಸಾಧಿಸಿವೆ. ಇದು ಹಗುರವಾಗಿರುವುದರಿಂದ ಸಾಗಣೆ ಸುಲಭವಾಗುತ್ತದೆ. ಇದಲ್ಲದೇ ಕೀಟ ಬಾಧೆಯ ಸಾಧ್ಯತೆಗಳು ತುಂಬಾ ಕಡಿಮೆ ಅಂತಾರೆ ವಿಜ್ಞಾನಿ ಲಕ್ಷ್ಮಿಪತಿ. ಭರವಸೆಯ ಫಲಿತಾಂಶ ನೀಡುತ್ತಿರುವ ಸೂಕ್ಷ್ಮ ಪೋಷಕಾಂಶಗಳು: ಕೊಥಪೇಟಾ, ಕಡಿಯಂ, ವೆಲಿಚೆರು ಮತ್ತು ಪ್ರತಿಪಾಡು ಮುಂತಾದ ಪ್ರದೇಶಗಳಲ್ಲಿ ಕಂಡುಬರುವ ಮಣ್ಣಿನಲ್ಲಿ ನೆಮಟೋಡ್ ಬಾಧೆ ಹೆಚ್ಚಾಗಿರುವ ಕಾರಣದಿಂದ ಕ್ಯಾಮೊಮೈಲ್ ಮತ್ತು ಸ್ಪಾತಿಫಿಲಮ್‌ನಂತಹ ಸಸ್ಯಗಳನ್ನು ಈಗ ಮಣ್ಣಿಲ್ಲದೇ ಬೆಳೆಸಲಾಗುತ್ತಿದೆ.
