ಉದಯವಾಹಿನಿ, ಟೆಹ್ರಾನ್: ಇರಾನ್‌ನ ಚಾಬಹಾರ್ ಬಂದರು ಯೋಜನೆಗೆ ಈ ವರ್ಷ ಯಾವುದೇ ನಿಧಿಯನ್ನು ಮೀಸಲಿಡದಿರುವ ಭಾರತ ಸರಕಾರದ ನಿರ್ಧಾರವು ನಿರಾಶೆ ಉಂಟು ಮಾಡಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ಹೇಳಿದ್ದಾರೆ.
ಚಾಬಹಾ‌ರ್ ಬಂದರನ್ನು ಸುವರ್ಣ ದ್ವಾರವೆಂದು ಬಣ್ಣಿಸಿದ ಅಬ್ಬಾಸ್ ಅರಾಗ್ನಿ, ಈ ಯೋಜನೆ ಭಾರತಕ್ಕೆ ಮಧ್ಯ ಏಷ್ಯಾ ಹಾಗೂ ಯುರೋಪ್ ದೇಶಗಳೊಂದಿಗೆ ಸಂಪರ್ಕವನ್ನು ವಿಸ್ತರಿಸುವ ಮಹತ್ವದ ಅವಕಾಶವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀಡಿದ ವಿಶೇಷ ಸಂದರ್ಶನದಲ್ಲಿ ಚಾಬಹಾರ್ ಬಂದರು ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಿರುವುದು ನಿರಾಶೆ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಬ್ಬಾಸ್ ಅರಾಗ್ನಿ ಹೌದು, ಇದು ಇರಾನ್ ಮತ್ತು ಭಾರತ ಎರಡೂ ದೇಶಕ್ಕೂ ನಿರಾಶೆಯ ವಿಷಯವೆಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!