ಉದಯವಾಹಿನಿ, ರಿಯಾದ್,: ಹಕ್ಕಿ ಜ್ವರ ಮತ್ತು ಇತರ ಪ್ರಾಣಿಗಳ ರೋಗಗಳ ವಿರುದ್ಧ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಸೌದಿ ಅರೇಬಿಯಾ ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮತ್ತು ಮೊಟ್ಟೆ ಆಮದುಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ.
ಬಾಂಗ್ಲಾದೇಶ, ಚೀನ, ಇಂಡೊನೇಶ್ಯಾ, ಇರಾನ್, ಬ್ರಿಟನ್, ಭಾರತ ಸೇರಿದಂತೆ 40 ದೇಶಗಳ ಆಮದುಗಳ ಮೇಲೆ ಈ ನಿಷೇಧ ಅನ್ವಯಿಸುತ್ತದೆ. ಇದರ ಜೊತೆಗೆ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 16 ಇತರ ದೇಶಗಳ ಮೇಲೆ ಭಾಗಷಃ ನಿಷೇಧ( ಕೆಲವು ನಗರಗಳ ಮೇಲೆ ಮಾತ್ರ) ಅನ್ವಯಿಸುತ್ತದೆ ಎಂದು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (ಎಸ್‌ಎಫ್‌ಡಿಎ) ಹೇಳಿದೆ.

Leave a Reply

Your email address will not be published. Required fields are marked *

error: Content is protected !!