ಉದಯವಾಹಿನಿ,: ಅವ್ರೆಲ್ಲಾ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕು ಅಂದುಕೊಂಡಿದ್ದವರು. ಕಿರುಚಿತ್ರ, ಇವೆಂಟ್ಗಳು ಮಾಡಿ ಒಂದು ಹಂತಕ್ಕೆ ಬಂದಿದ್ದರು. ಒಟಿಟಿಗೆ ಸಿನಿಮಾ ಮಾಡುವ ಹಂತಕ್ಕೂ ಬಂದಿದ್ದರು. ಒಂದು ಹೊಸ ಸಿನಿಮಾವನ್ನೂ ಶುರು ಮಾಡಿದ್ರು. ಅದನ್ನು ಮುಗಿಸಿದ್ರೆ ಪ್ರೊಮೋಷನ್, ಥಿಯೇಟರ್, ಜನ ಅಂತಾ ಓಡಾಡ್ಬೇಕಿತ್ತು. ಆದರೆ ಈಗ ತಾವು ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ. ಸಣ್ಣ ಕಿರಿಕ್ನಿಂದ ತಮ್ಮದೇ ತಂಡದ ಡೈರೆಕ್ಟರ್ನ ಕಿಡ್ನಾಪ್ ಮಾಡಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಭೀಮ’ ಸಿನಿಮಾದಲ್ಲಿ ನಟಿಸಿದ್ದ ನಟಿಯೋರ್ವಳು ಸೇರಿ 11 ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಅಂದ್ಹಾಗೆ, ಈ ಗ್ಯಾಂಗ್ನಿಂದ ಕಿಡ್ನಾಪ್ ಆಗಿದ್ದ ನಿರ್ದೇಶಕನ ಹೆಸರು ಅನೀಶ್. ‘ಭರವಸೆಯೇ ಜೀವನ’ ಎಂಬ ಶಾರ್ಟ್ ಮೂವಿ ಮಾಡಿದ್ದ. ಆದರೆ ಅದು ಎಲ್ಲಿಯೂ ರಿಲೀಸ್ ಆಗಿಲ್ಲ. ಈ ಅನೀಶ್ ಶಾರ್ಟ್ ಮೂವಿಗಳನ್ನ ನಿರ್ದೇಶನ ಮಾಡುವಾಗ ಈತನ ಜೊತೆ ಒಂದು ತಂಡವೂ ಇತ್ತು. ಇವೆಂಟ್ಗಳನ್ನ ನಡೆಸುತಿದ್ದ ಆಶೀರ್ವಾದ್ ಎಂಬಾತ ಹಾಗೂ ದುನಿಯಾ ವಿಜಯ್ ಅವರ ‘ಭೀಮಾ’ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯ ಎಂಬಾಕೆ ಸೇರಿ 11 ಜನ ಒಂದು ತಂಡ ಆಗಿದ್ದರು.
ಎಲ್ಲರಿಗೂ ಸಿನಿಮಾ ಮಾಡಬೇಕು. ಸ್ಟ್ಯಾಂಡ್ ಆಗಬೇಕು ಅನ್ನೋ ಛಲ ಹೊಂದಿದ್ದರು. ಎಲ್ಲರದ್ದೂ ಒಂದೇ ಕನಸಾಗಿರೋದ್ರಿಂದ ಕೈ ಜೋಡಿಸಿದ್ರು. ಹೊಸ ಸಿನಿಮಾ ಮಾಡೋಕೆ ತಯಾರಿ ಮಾಡಿದ್ರು. ‘ಜೀವನದ ಭಾಷೆ’ ಎಂಬ ಸಿನಿಮಾವನ್ನ ಕೂಡ ಶುರು ಮಾಡಿದ್ರು. ಸಿನಿಮಾಗೆ ಆಶೀರ್ವಾದ್ ಐದು ಲಕ್ಷ ಹಣವನ್ನೂ ಹೂಡಿಕೆ ಮಾಡಿದ್ದ. ಆ್ಯಕ್ಟಿಂಗ್ ಇಷ್ಟ ಅಂತಾ ಹೂಡಿಕೆ ಅಷ್ಟೆ ಅಲ್ಲಾ ನಂಗೆ ಕ್ಯಾರೆಕ್ಟರ್ ಬೇಕು ಅಂತಾ ಆಶೀರ್ವಾದ್ ತಿಳಿಸಿದ್ದ. ಸಿನಿಮಾವನ್ನು ಒಟಿಟಿಗೆ ರಿಲೀಸ್ ಮಾಡಬೇಕು ಅಂತಾ ಪ್ಲಾನ್ ಮಾಡಿದ್ರು. ಆದ್ರೆ ಇದ್ದಕ್ಕಿದ್ದಹಾಗೆ ಸಿನಿಮಾ ಸ್ಟಾಪ್ ಆಗಿತ್ತು. ಅಲ್ಲಿಂದಲೇ ಎಲ್ಲರ ಮಧ್ಯೆ ಕಿರಿಕ್ ಶುರುವಾಗಿತ್ತು.
