ಉದಯವಾಹಿನಿ,: ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ‘ವೀರ ಕಂಬಳ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಕಂಬಳ ಕ್ರೀಡೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಆದಿತ್ಯ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಹ ನಟಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ‘ಕ್ಲೈಮ್ಯಾಕ್ಸ್ನಲ್ಲಿ ಸಂದೇಶ ನೀಡುವ ಪಾತ್ರವೊಂದು ಬೇಕಾಗಿತ್ತು, ಆ ಪಾತ್ರ ಬಹಳ ಘನವಾದ ಪಾತ್ರ ಆಗಿರಬೇಕಿತ್ತು, ನನಗೆ ಹೆಗ್ಗಡೆ ಅವರು ಚಿಕ್ಕದ್ದಿನಿಂದ ಪರಿಚಯ, ಒಟ್ಟಿಗೆ ಕ್ರಿಕೆಟ್ ಆಡಿದ್ದೆವು, ಹಾಗಾಗಿ ನಾನು ಕೇಳಿದೆ ಅವರೂ ಸಹ ಒಪ್ಪಿಕೊಂಡರು. ಆದರೆ ಕೆಲ ತಿಂಗಳ ಹಿಂದೆ ಕೆಲವರು ಕರೆ ಮಾಡಿ, ಹೆಗ್ಗಡೆ ಅವರು ನಟಿಸಿರುವ ಸೀನ್ ಅನ್ನು ತೆಗೆದು ಹಾಕಬೇಕು ಎಂದು ಬೆದರಿಕೆ ಹಾಕಿದರು.
