ಉದಯವಾಹಿನಿ, ಚಿಕ್ಕಬಳ್ಳಾಪುರ: ಕಂದಾಯ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಕಂದಾಯ ಸೇವೆಗಳ ಸಮರ್ಪಣಾ ವಿತರಣಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಚಿಕ್ಕಬಳ್ಳಾಪುರ ನಗರದ ಚೊಕ್ಕಹಳ್ಳಿ ಬಳಿ ಬೃಹತ್ ಕಂದಾಯ ಇಲಾಖೆಯ ಸೇವೆಗಳ ಸವಲತ್ತುಗಳ ವಿತರಣಾ ಸಮಾವೇಶವನ್ನ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಸಚಿವ ಡಾ.ಎಂ.ಸಿ ಸುಧಾಕರ್ ಸೇರಿದಂತೆ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಪುಟ್ಟಸ್ವಾಮಿಗೌಡ ಚಾಲನೆ ನೀಡಿದರು.
ಹತ್ತಾರು ವರ್ಷಗಳಿಂದ ಪೌತಿ ಖಾತೆ ಆಗದೇ ಪಡಿಪಾಟಲು ಪಡ್ತಿದ್ದ ಜನರಿಗೆ ಬಿಗ್ ರಿಲೀಫ್ ಕೊಡುವ ಕೆಲಸ ಹಾಗೂ ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ನಡೆಸಲಾಯಿತು. 25,000 ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಮಾಡುವ ಕಾರ್ಯಕ್ರಮ ನಡೆಸಲಾಯಿತು.
ಜನ ನೆಮ್ಮದಿಯಾಗಿ ಬದುಕಲಿ ಅಂತ ನಾವೇ ಅರ್ಜಿ ಪಡೆಯದೇ ಮನೆ ಬಾಗಿಲಿಗೆ ಹೋಗಿ ಈ ಕೆಲಸ ಮಾಡಿಕೊಟ್ಟಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಜನ ತಾಲೂಕು ಕಚೇರಿಗಳಿಗೆ ಅಲೆಯುವುದನ್ನ ತಪ್ಪಿಸಿ, 30-40 ವರ್ಷದಿಂದ ಆಗದೇ ಇದ್ದ ಈ ಕೆಲಸಗಳನ್ನ ನಾವ್ ಮಾಡಿದ್ದೇವೆ. ಇದು ನಮ್ಮ ಸಿದ್ದರಾಮಯ್ಯ-ಡಿಕೆಶಿಯವರ ಸರ್ಕಾರದ ಭೂಗ್ಯಾರಂಟಿ ಇದು ಎಂದು ಬಣ್ಣಿಸಿದರು.
