ಉದಯವಾಹಿನಿ, ಬೆಂಗಳೂರು: ಶಾಸಕರ ಡಿನ್ನರ್ ಮೀಟಿಂಗ್ ಹೊಸದೇನು ಅಲ್ಲ. ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ತಿಳಿಸಿದ್ದಾರೆ.
ಡಿಕೆಶಿ ಬಣದ ಶಾಸಕರಿಂದ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿನ್ನರ್ ಮೀಟಿಂಗ್ ಹೊಸದೇನಲ್ಲ. ನಾವು ಡಿನ್ನರ್ ಮೀಟಿಂಗ್ ಮಾಡ್ತೀವಿ. ಮೊದಲಿನಿಂದಲೂ ಇದು ನಡೆದುಕೊಂಡು ಬಂದಿದೆ. ಶಾಸಕ ಬಾಲಕೃಷ್ಣ ಅವರೇ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಸಿಎಂ, ಡಿಸಿಎಂ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದಾರೆ. ಅವರು ಮಾತನಾಡಿದ ಮೇಲೆ ನಾವ್ಯಾರು ಮಾತನಾಡಬಾರದು ಎಂದಿದ್ದಾರೆ.

ಹೈಕಮಾಂಡ್ ಸೂಕ್ತ ಸಮಯದಲ್ಲಿ ಸಿಎಂ, ಡಿಸಿಎಂ ಕರೆದು ಮಾತನಾಡ್ತಾರೆ. ಎಲ್ಲಾ ಪಕ್ಷದಲ್ಲೂ ನಾಯಕತ್ವದ ಬಗ್ಗೆ ಚರ್ಚೆ ಆಗುತ್ತೆ. ಎಐಸಿಸಿ ಅಧ್ಯಕ್ಷರಿಗೆ ರಾಜ್ಯದ ಸಣ್ಣ ವಿಚಾರವೂ ಗೊತ್ತಿದೆ. ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.  ಸಚಿವ ಸಂಪುಟ ಪುನರ್ ರಚನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಅಧಿವೇಶನದ ಬಳಿಕ ಸಂಪುಟ ಪುನರ್ ರಚನೆ ಆಗುವ ವಿಶ್ವಾಸ ಇದೆ. ನಾನು ಸಚಿವನಾಗಬೇಕೆಂಬ ಆಸೆ ಇದೆ. ಮೂರು ಬಾರಿ ಶಾಸಕನಾಗಿದ್ದೇನೆ, ಮುಖ್ಯ ಸಚೇತಕ, ನವದೆಹಲಿ ಪ್ರತಿನಿಧಿ ಆಗಿದ್ದೇನೆ. ಕೆಕೆಆರ್‌ಡಿಬಿ ಅಧ್ಯಕ್ಷನಾಗಿ ಕೆಲಸ ಮಾಡ್ತಿದ್ದೀನಿ. ನನಗೂ ಸಚಿವ ಆಗೋ ಆಸೆ ಇದೆ. ಹೊಸ ಶಾಸಕರು, ಎಂಎಲ್‌ಸಿಗಳು ಸಚಿವ ಸ್ಥಾನ ಕೇಳೋದು ತಪ್ಪೇನಿಲ್ಲ. ಆದರೆ ಎಂಟು ಬಾರಿ ಶಾಸಕರಾದ ದೇಶಪಾಂಡೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಯಾರನ್ನ ಮಂತ್ರಿ ಮಾಡಬೇಕು ಅಂತ ಸಿಎಂ, ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!