ಉದಯವಾಹಿನಿ, ಬೆಂಗಳೂರು: 11 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ. ಏಪ್ರಿಲ್ 1 ರಂದು ಕರಗ ಉತ್ಸವ ನಡೆಸಲು ಮುಜರಾಯಿ ಇಲಾಖೆಯು, ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧರಿಸಿದೆ.
ಈ ಬಾರಿಯ ಬೆಂಗಳೂರು ಕರಗ ಏಪ್ರಿಲ್ -1 ರಂದು ನಡೆಯಲಿದೆ. 11 ದಿನಗಳ ಕಾಲ ನಡೆಯುವ ಕರಗ ಅದ್ಧೂರಿ ಉತ್ಸವಕ್ಕೆ ಮಾರ್ಚ್ 24 ರಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಗುತ್ತದೆ. ಮಾರ್ಚ್ 30 ರಂದು ಹಸಿ ಕರಗ ನಡೆಯಲಿದೆ. ಅದ್ರಲ್ಲೂ ಈ ಬಾರಿ ಮೈಸೂರು ದಸರಾ ಮಾದರಿಯಲ್ಲೇ ಕರಗ ಮಹೋತ್ಸವಕ್ಕೆ ಪ್ಲ್ಯಾನ್ ರೂಪಿಸುತ್ತಿದ್ದೇವೆ ಅಂತಾ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇನ್ನು ಕರಗ ಕಮೀಷನ್ ಬಾರಿ ಅನುದಾನದ ಬಳಕೆ ರಿಲೀಸ್ ಟೆಂಡರ್ ಜವಾಬ್ದಾರಿಯನ್ನ ಜಿಬಿಎ ಹೆಗಲಿಗೆ ವಹಿಸಲಿದೆ. ದೇಗುಲದ ಒಳಗಿನ ಸಿದ್ಧತೆ ಮಾತ್ರ ಮುಜರಾಯಿ ನೋಡಿಕೊಳ್ಳಲಿದೆ ಅಂತಾ ಸಚಿವರು ಹೇಳಿದ್ರು. ಇನ್ನು ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಾತಿಯೂ ನಡೆದಿದ್ದು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಿಂತನೆ ನಡೆದಿದೆಯಂತೆ. ಈ ಬಾರಿ ವಿಶೇಷ ಕರಗ ನಡೆಸುತ್ತೇವೆ ಅಂತಾ ವ್ಯವಸ್ಥಾಪನಾ ಸಮಿತಿ ಹೇಳಿದೆ.
16ನೇ ಬಾರಿಗೆ ಕರಗ ಹೊರಲಿದ್ದಾರೆ ಜ್ಞಾನೇಂದ್ರ ಸ್ವಾಮಿ
ಏಪ್ರಿಲ್ 1 ರಂದು ನಡೆಯಲಿರುವ ಶಕ್ತ್ಯೋತ್ಸವದಲ್ಲಿ ಎ. ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಜ್ಞಾನೇಂದ್ರ ಸ್ವಾಮಿ, ಈ ಸಲ 16ನೇ ಬಾರಿಗೆ ಕರಗ ಹೊರಲಿದ್ದಾರೆ.
