ಉದಯವಾಹಿನಿ, ಕಾಬೂಲ್: ಪಾಕಿಸ್ತಾನ ಈಗ ತಾಲಿಬಾನ್ ಆಳ್ವಿಕೆಯಲ್ಲಿರುವ ರಾಷ್ಟ್ರದೊಂದಿಗೆ ʻಮುಕ್ತ ಯುದ್ಧʼದಲ್ಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ. ತನ್ನ ಪಡೆಗಳು 19 ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳು ಮತ್ತು 2 ಸೇನಾ ನೆಲೆಗಳನ್ನ ವಶಪಡಿಸಿಕೊಂಡಿದೆ. ಇದರೊಂದಿಗೆ F-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ತಾಲಿಬಾನ್ ನೇತೃತ್ವದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ಈ ಬೆನ್ನಲ್ಲೇ ಪಾಕ್ ಪ್ರಧಾನಿ ಮುಕ್ತ ಯುದ್ಧ ಘೋಷಣೆ ಮಾಡಿದ್ದಾರೆ.
ಪಾಕಿಸ್ತಾನ ಈಗ ತಾಲಿಬಾನ್ ಆಳ್ವಿಕೆಯಲ್ಲಿರುವ ರಾಷ್ಟ್ರದೊಂದಿಗೆ ಮುಕ್ತ ಯುದ್ಧದಲ್ಲಿದೆ ಎಂದು ಘೋಷಿಸಿದ್ದಾರೆ. ಇತ್ತ ವಿವಾದಿತ ಡುರಾಂಡ್ ಲೈನ್‌ನ ಉದ್ದಕ್ಕೂ ಕಂದಹಾರ್ ಮತ್ತು ಹೆಲ್ಮಂಡ್‌ನಲ್ಲಿಯೂ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
