ಉದಯವಾಹಿನಿ, ನ್ಯೂಯಾರ್ಕ್, ಅಮೆರಿಕ​: 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಅಮೆರಿಕದ ರಾಜಕಾರಣಿ, ಬಹುಶಃ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯನ್ನು ಸಂಘಟಿಸಲು ಪ್ರಯತ್ನಿಸಿದ ಆರೋಪದ ಮೇಲೆ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಈ ವಾರ ವಿಚಾರಣೆಗೆ ಒಳಪಡಿಸಲಾಗಿದೆ. ಆಸಿಫ್​ ಮರ್ಚೆಂಟ್​ ಎಂಬವರು ವಿಚಾರಣೆಗೆ ಒಳಪಟ್ಟವರಾಗಿದ್ದಾರೆ. ಆದರೆ, ಆರೋಪಿ ತನ್ನ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ನಿರಾಕರಿಸಿದ್ದು, ತಪ್ಪೊಪ್ಪಿಕೊಂಡಿಲ್ಲ. ಬುಧವಾರ ಈತನನ್ನು ನ್ಯೂಯಾರ್ಕ್​ನಲ್ಲಿ ವಿಚಾರಣೆ ನಡೆಸಲಾಗಿದ್ದು, ಈತ ರಹಸ್ಯ ಕೊಲೆಗೆ ನಿಯೋಜಿಸಿದ ವ್ಯಕ್ತಿಯನ್ನು ಭೇಟಿಯಾಗಿ 5,000 ಡಾಲರ್​ ಪಾವತಿಸಿದ್ದ. ಆದರೆ, ಅವರು ರಹಸ್ಯ ಎಫ್​ಬಿಐ ಏಜೆಂಟ್​ ಆಗಿದ್ದರು ಎಂದು ಪ್ರಾಸಿಕ್ಯೂಟರ್​ ವಾದಿಸಿದ್ದಾರೆ.

ಈತ ಹೊಟೇಲ್​ ನ್ಯಾಪ್ಕಿನ್​ ಮೇಲೆ ಕೊಲೆ ಮಾಡುವ ಕುರಿತು ಯೋಜನೆ ರೂಪಿಸಿದ್ದನ್ನು ಅದರಲ್ಲಿ ವಿವರಿಸಿದ್ದ. 2024ರ ಜೂನ್​ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ರಾಜಕೀಯ ವ್ಯಕ್ತಿಯನ್ನು ಗುಂಡು ಹಾರಿಸಲು ಯೋಜಿಸಿದ್ದ. ಬಳಿಕ ಕೊಲೆಗಾರ ತಪ್ಪಿಸಿಕೊಳ್ಳಲು ಪ್ರತಿಭಟನೆಯನ್ನು ನಡೆಸಿದ್ದ ಎಂದು ಮಧ್ಯವರ್ತಿಯೊಬ್ಬನ ಸಾಕ್ಷ್ಯದ ವಿಡಿಯೋವನ್ನು ನ್ಯಾಯಾಲಯದಲ್ಲಿ ಪ್ರದರ್ಶಿಸಲಾಯಿತು.

ಮಧ್ಯವರ್ತಿ ನದೀಮ್ ಅಲಿಯು, ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಹೇಳಿಕೆ ನೀಡುವಾಗ ನನಗೆ ಆಘಾತವಾಯಿತು ಎಂದಿದ್ದಾನೆ. ಎರಡು ದಿನಗಳ ಕಾಲ ನಡೆದ ವಾದ – ಪ್ರತಿವಾದದಲ್ಲಿ ಮರ್ಚೆಂಟ್ ಅವರಿಗೆ ಕೊಲೆಗಾರರನ್ನು ಸಾಲಾಗಿ ನಿಲ್ಲಿಸುವಂತೆ ಕೇಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ಎಫ್​ಬಿಐಗಾಗಿ ರಹಸ್ಯವಾಗಿ ಮಾಡಿದ ರೆಕಾರ್ಡಿಂಗ್‌ ಸಾಕ್ಷ್ಯಗಳನ್ನು ಸಹ ಇದೇ ವೇಳೆ ಪ್ರದರ್ಶಿಸಲಾಯಿತು.

ಮರ್ಚೆಂಟ್​, ಕೊಲೆಗೆ ನಿಯೋಜಿಸಿದ್ದ ವ್ಯಕ್ತಿಯನ್ನು ಭೇಟಿಯಾಗಿ 5,000 ಡಾಲರ್​ ಅನ್ನು ಪಾವತಿ ಮಾಡಿದ್ದು, ಅವರಿಗೆ ಕೊಲೆಗೆ ಉದ್ದೇಶಿಸಲಾದ ವ್ಯಕ್ತಿಯ ಹೆಸರನ್ನು ಹೇಳಿದ್ದರು. ಆಗ ಆತ, ಪಾಕಿಸ್ತಾನ ಮತ್ತು ಮುಸ್ಲಿಂ ಜಗತ್ತಿಗೆ ನೋವುಂಟು ಮಾಡುತ್ತಿರುವ ವ್ಯಕ್ತಿ ಎಂದು ಆಲಿ ಹೇಳಿದ್ದ ಎಂದು ಅಮೆರಿಕದ ಸಹಾಯಕ ಅಟಾರ್ನಿ ನೀನಾ ಗುಪ್ತಾ ತಿಳಿಸಿದ್ದಾರೆ. ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ಮರ್ಚೆಂಟ್ ಅವರ ಲ್ಯಾಪ್‌ಟಾಪ್‌ನಲ್ಲಿ ಟ್ರಂಪ್ ರ‍್ಯಾಲಿ ಸ್ಥಳಗಳಿಗಾಗಿ ಹುಡುಕಾಟಗಳು ನಡೆದಿವೆ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!