ಉದಯವಾಹಿನಿ, ಝೂರಿಕ್ : ವರ್ಲ್ಡ್ ಇಕನಾಮಿಕ್ ಫೋರಂ (ಡಬ್ಲ್ಯುಇಎಫ್) ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರ್ಗೆ ಬ್ರೆಂಡ ಗುರುವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲೈಂಗಿಕ ಅಪರಾಧಿ ಜೆಫ್ರಿ ಎಪ್ಪಿನ್ ಜೊತೆ ಅವರು ಹಿಂದೆ ಹೊಂದಿದ್ದ ನಂಟಿನ ಬಗ್ಗೆ ವೇದಿಕೆ ಸ್ವತಂತ್ರ ತನಿಖೆಗೆ ಚಾಲನೆ ನೀಡಿದ ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.
2017ರಿಂದ ವೇದಿಕೆಯ ಮುಖ್ಯಸ್ಥರಾಗಿರುವ ಬ್ರೆಂಡ ಗುರುವಾರ ಹೇಳಿಕೆಯೊಂದನ್ನು ಹೊರಡಿಸಿ ಹುದ್ದೆಯಿಂದ ಕೆಳಗಿಳಿಯುವ ತನ್ನ ನಿರ್ಧಾರವನ್ನು ಪ್ರಕಟಿಸಿದರು.
ಎಪ್ಪಿನ್ ಜೊತೆ ಬ್ರೆಂಡ ಮೂರು ಬಾರಿ ವಾಣಿಜ್ಯ ಸಂಬಂಧಿ ಭೋಜನ ಮಾಡಿದ್ದರು ಹಾಗೂ ಇಮೇಲ್ ಮತ್ತು ಟೆಕ್ಸ್ ಸಂದೇಶಗಳ ಮೂಲಕ ಸಂಪರ್ಕ ಹೊಂದಿದ್ದರು ಎಂಬುದನ್ನು ಅಮೆರಿಕದ ಕಾನೂನು ಇಲಾಖೆ ಬಿಡುಗಡೆಗೊಳಿಸಿದ ದಾಖಲೆಗಳು ಸೂಚಿಸಿವೆ ಎಂದು ರಾಯ್ಸರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ, ವರ್ಲ್ಡ್ ಇಕನಾಮಿಕ್ ಫೋರಂಯ ಅಧ್ಯಕ್ಷ ಹಾಗೂ ಸಿಇಒ ಹುದ್ದೆಯಿಂದ ಕೆಳಗಿಳಿಯಲು ನಾನು ನಿರ್ಧರಿಸಿದ್ದೇನೆ. ಇಲ್ಲಿ ನಾನು ಕಳೆದ ಎಂಟೂವರೆ ವರ್ಷಗಳು ಅತ್ಯಂತ ಫಲಪ್ರದವಾಗಿವೆ” ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!