ಉದಯವಾಹಿನಿ, ಟೆಹ್ರಾನ್: ಇರಾನ್‌ನ ಚಾಬಹಾರ್ ಬಂದರು ಯೋಜನೆಗೆ ಈ ವರ್ಷ ಯಾವುದೇ ನಿಧಿಯನ್ನು ಮೀಸಲಿಡದಿರುವ ಭಾರತ ಸರಕಾರದ ನಿರ್ಧಾರವು ನಿರಾಶೆ ಉಂಟು ಮಾಡಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ನಿ ಹೇಳಿದ್ದಾರೆ.
ಚಾಬಹಾ‌ರ್ ಬಂದರನ್ನು ಸುವರ್ಣ ದ್ವಾರವೆಂದು ಬಣ್ಣಿಸಿದ ಅಬ್ಬಾಸ್ ಅರಾಗಿ ಈ ಯೋಜನೆ ಭಾರತಕ್ಕೆ ಮಧ್ಯ ಏಷ್ಯಾ ಹಾಗೂ ಯುರೋಪ್ ದೇಶಗಳೊಂದಿಗೆ ಸಂಪರ್ಕವನ್ನು ವಿಸ್ತರಿಸುವ ಮಹತ್ವದ ಅವಕಾಶವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀಡಿದ ವಿಶೇಷ ಸಂದರ್ಶನದಲ್ಲಿ ಚಾಬಹಾರ್ ಬಂದರು ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಿರುವುದು ನಿರಾಶೆ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಬ್ಬಾಸ್ ಅರಾಗ್ನಿ, ಹೌದು, ಇದು ಇರಾನ್ ಮತ್ತು ಭಾರತ ಎರಡೂ ದೇಶಕ್ಕೂ ನಿರಾಶೆಯ ವಿಷಯವೆಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಅದು ಅತ್ಯುತ್ತಮ ಸಾರಿಗೆ ಮಾರ್ಗ ಎಂದು ನಾನು ಭಾವಿಸುತ್ತೇನೆ. ಒಂದು ದಿನ ನಾವು ಈ ಬಂದರಿನ ಸಂಪೂರ್ಣ ಅಭಿವೃದ್ಧಿಯನ್ನು ಕಣ್ಣುಂಬಿಕೊಳ್ಳುವ ಅವಕಾಶ ದೊರೆಯಲಿ ಎಂಬುದು ನನ್ನ ಆಸೆಯಾಗಿದೆ ಎಂದು ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ, ಚಾಬಹಾರ್ ಹಿಂದೂ ಮಹಾಸಾಗರ ಪ್ರದೇಶವನ್ನು ಮಧ್ಯ ಏಷ್ಯಾ ಯುರೋಪ್ ದೇಶಗಳೊಂದಿಗೆ ಸಂಪರ್ಕಿಸುವ ‘ಸುವರ್ಣ ದ್ವಾರ’ವಾಗಿದೆ. ಈ ಬಂದರು ಸಂಪೂರ್ಣವಾಗಿ ಅಭಿವೃದ್ಧಿಗೊಂಡರೆ ಇರಾನ್ ಮೂಲಕ ಭಾರತವನ್ನು ಮಧ್ಯ ಏಷ್ಯಾ ಯುರೋಪ್ ಗೆ ಸಂಪರ್ಕಿಸುವಲ್ಲಿ ಇದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಬ್ಬಾಸ್ ಅರಾಗ್ನಿ ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಹೊಸ ಉದ್ವಿಗ್ನತೆಯ ಮಧ್ಯೆ ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಯಾವುದೇ ಹಣವನ್ನು ಹಂಚಿಕೆ ಮಾಡಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!