ಉದಯವಾಹಿನಿ, ತೂಕ ಇಳಿಸಬೇಕು ಎಂದುಕೊಳ್ಳುವವರು ಮೊದಲಾಗಿ ಗಮನ ಕೊಡಬೇಕಾದದ್ದು ಆಹಾರದ ಗುಣಮಟ್ಟ, ಅದರಲ್ಲೂ ಫೈಬರ್ ಸಮೃದ್ಧ ಆಹಾರಗಳು ಡಯೆಟ್ ಪಾಲನೆ ಮಾಡುವವರಿಗೆ ಅತ್ಯಂತ ಸಹಾಯಕ. ಫೈಬರ್ ಅಂದರೆ ಜೀರ್ಣಕ್ರಿಯೆಯನ್ನು ಸುಧಾರಿಸುವ, ಹೊಟ್ಟೆ ತುಂಬಿದ ಭಾವನೆ ನೀಡುವ ಮತ್ತು ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುವ ಪೋಷಕಾಂಶ.
ಓಟ್ಸ್ ಮತ್ತು ಸಂಪೂರ್ಣ ಧಾನ್ಯಗಳು
ಬೆಳಗಿನ ಉಪಹಾರದಲ್ಲಿ ಓಟ್ಸ್ ರಾಗಿ, ಜೋಳ, ಬ್ರೌನ್ ರೈಸ್ ಸೇರಿಸಿಕೊಳ್ಳುವುದರಿಂದ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ಸಿಗುತ್ತದೆ. ಇವು ನಿಧಾನವಾಗಿ ಜೀರ್ಣವಾಗುವ ಕಾರಣ ರಕ್ತದಲ್ಲಿನ ಸಕ್ಕರೆ ಮಟ್ಟವೂ ನಿಯಂತ್ರಿತವಾಗಿರುತ್ತದೆ.
ತರಕಾರಿಗಳು
ಬೋಕಲಿ, ಕ್ಯಾರೆಟ್, ಬೀಟ್ರೋಟ್, ಸೊಪ್ಪುಗಳಂತಹ ತರಕಾರಿಗಳು ಫೈಬರ್ ಸಮೃದ್ಧವಾಗಿವೆ. ಇವುಗಳಲ್ಲಿ ಕ್ಯಾಲೊರಿಗಳು ಕಡಿಮೆ ಇರುವುದರಿಂದ ತೂಕ ಇಳಿಕೆಗೆ ಸಹಕಾರಿ. ದಿನನಿತ್ಯದ ಊಟದಲ್ಲಿ ಅರ್ಧ ತಟ್ಟೆ ತರಕಾರಿಗಳನ್ನು ಸೇರಿಸುವುದು ಉತ್ತಮ.
ಹಣ್ಣುಗಳು
ಸೇಬು, ಪೇರ್, ಪಪಾಯಿ, ಕಿತ್ತಳೆ ಹಣ್ಣುಗಳಲ್ಲಿ ನೈಸರ್ಗಿಕ ಫೈಬರ್ ಹೆಚ್ಚು. ಹಣ್ಣಿನ ರಸ ಬದಲು ಸಂಪೂರ್ಣ ಹಣ್ಣು ತಿನ್ನುವುದು ಉತ್ತಮ.

Leave a Reply

Your email address will not be published. Required fields are marked *

error: Content is protected !!