ಸಿಹಿ ತಿಂಡಿಗಳನ್ನು ತಿನ್ನಲು ಅನೇಕರು ಇಷ್ಟ ಪಡುತ್ತಾರೆ. ಆದರೆ ಇದು ತಿನ್ನಲು ಎಷ್ಟು ರುಚಿ ಇದೆಯೋ ಅಷ್ಟೇ ದೇಹಕ್ಕೆ ಸಮಸ್ಯೆಯನ್ನು ಉಂಟು ಮಾಡುತ್ತವೆ. ಅತಿಯಾದ ಸಿಹಿ ಪದಾರ್ಥಗಳ ಸೇವನೆಯಿಂದ ಮಧುಮೇಹ, ಬೊಜ್ಜು ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗುತ್ತದೆ. ಕೆಲವರಂತೂ ಸಿಹಿ ತಿಂಡಿಗಳನ್ನು ತಪ್ಪಿಸಲು ಪ್ರಯತ್ನ ಪಟ್ಟರೂ ಸಿಹಿ ತಿನ್ನಲೇಬೇಕು (Sugar Cravings) ಎಂದು ಹಲವರಿಗೆ ಅನಿಸುತ್ತದೆ. ಅದರಲ್ಲೂ ತೂಕ ಕಡಿಮೆ ಮಾಡಬೇಕು ಅನ್ನುವವರಿಗೆ ಇದೊಂದು ದೊಡ್ಡ ಸವಾಲು. ಈ ಸಮಸ್ಯೆಗೆ ಖ್ಯಾತ ಪೌಷ್ಟಿಕತಜ್ಞೆ ವೊಬ್ಬರು ಪರಿಹಾರ ನೀಡಿದ್ದು ಸಿಹಿ ತಿನ್ನಲು ಆಸೆ ಉಂಟಾದಾಗ ಏನು ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ.

ನಿಮಗೆ ಸಿಹಿ ತಿನ್ನಬೇಕು ಎನ್ನುವ ಬಯಕೆ ಆದಾಗ ನಿಮ್ಮ ಹಲ್ಲುಗಳನ್ನು ಉಜ್ಜಲು ಅವರು ಸಲಹೆ ನೀಡಿದ್ದಾರೆ. ಟೂತ್‌ ಪೇಸ್ಟ್‌ನಲ್ಲಿರುವ ಮೆಂಥಾಲ್ ಅಂಶವು ನಿಮ್ಮ ಬಾಯಿಯ ರುಚಿಯ ಕ್ರಿಯೆಯನ್ನು ಬದಲಾಯಿಸುತ್ತದೆ‌. ಇದು ಸಿಹಿಯ ಗ್ರಹಿಸುವಿಕೆಯನ್ನು ಕಹಿಯಾಗಿ ಅಥವಾ ಇಷ್ಟ ಪಡದ ರುಚಿಯಲ್ಲಿ ಬದಲಾಯಿಸುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಸಿಹಿ ತಿನ್ನಬೇಕೆಂಬ ಆಸೆ ನಿಮ್ಮಲ್ಲಿ ಬರದೇ ಇರಬಹುದು.

ಅದೇ ರೀತಿ ನಮ್ಮಲ್ಲಿ ಹೆಚ್ಚಿನವರಿಗೆ, ರಾತ್ರಿ ಹಲ್ಲುಜ್ಜುವ ಅಭ್ಯಾಸವು ಇರಲಿದೆ. ಹೆಚ್ಚಾಗಿ ಆಹಾರ ಸೇವಿಸಿದ ನಂತರ ಹಲ್ಲುಗಳನ್ನು ಉಜ್ಜುತ್ತಾರೆ. ಇದು ಮಾನಸಿಕವಾಗಿ ಇಂದಿನ ಆಹಾರ ಸೇವನೆ ಮುಗಿದಿದೆ ಎಂಬ ಅರ್ಥವನ್ನು ನೀಡುತ್ತದೆ. ಹೀಗಾಗಿ ಮಾನಸಿಕವಾಗಿ ಸಿಹಿ ತಿನ್ನುವುದನ್ನು ಹೀಗೂ ಕೂಡ ನಾವು ತಪ್ಪಿಸಬಹುದಾಗಿದೆ. ಅದೇ ರೀತಿ ಸಿಹಿತಿಂಡಿಗಳ ಬದಲಿಗೆ ಹಣ್ಣು, ಒಣ ಹಣ್ಣು ಅಥವಾ ಆರೋಗ್ಯಕರ ಆಹಾರ ಸೇವಿಸಲು ಪ್ರಯತ್ನಿಸಿ.

ಕಡಿಮೆ ಪ್ರೋಟೀನ್ ಸೇವನೆ, ಕಡಿಮೆ ಉಪ್ಪು ಸೇವನೆ, ಊಟದ ನಡುವೆ ದೊಡ್ಡ ಅಂತರ, ನಿದ್ರಾಹೀನತೆ ಇದ್ದವರಿಗೆ ಈ ಟಿಪ್ಸ್ ಸಹಾಯ ಮಾಡುವುದಿಲ್ಲ, ಏಕೆಂದರೆ ನಿಮ್ಮ ಹಲ್ಲುಗಳನ್ನು ಹಲ್ಲುಜ್ಜುವುದು ಮನೋವಿಜ್ಞಾನದ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಶರೀರಶಾಸ್ತ್ರದ ಮೇಲೆ ಅಲ್ಲ.

ಹಲ್ಲುಜ್ಜುವುದು ಸಿಹಿ ತಡೆಯಲು ಖಾಯಂ ಪರಿಹಾರ ಅಲ್ಲ , ಆದರೆ ಇದು ಒಂದು ಉಪಯುಕ್ತ ವಿಧಾನ. ತೂಕ ಇಳಿಸಬೇಕು ಎಂದು ಇದ್ದವರು ಸಿಹಿ ತಿನ್ನಲು ಮನಸ್ಸು ಆದಾಗ ಈ ಸರಳ ವಿಧಾನವನ್ನು ಅನುಸರಿಸಬಹುದು.

Leave a Reply

Your email address will not be published. Required fields are marked *

error: Content is protected !!